April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಾಣಿ ಕಾಲೇಜು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಬೆಳ್ತಂಗಡಿ: ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿ ಶಿಸ್ತು ಬದ್ಧರಾಗಿ ಮುನ್ನಡೆದಾಗ ಯಶಸ್ಸು ಪಡೆಯಬಹುದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ , ಸಮಯ ಪಾಲನೆಗೆ ಆದ್ಯತೆ ಕೊಟ್ಟು, ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ, ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಕಾಲೇಜಿನ ನೀತಿ ನಿಯಮಗಳ ಮಾಹಿತಿ ನೀಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರ್ಷಿತ್ ಕುಮಾರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಿ ಯದುಪತಿ ಗೌಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುಧೀರ್ ಕೆ ಎನ್ ಧನ್ಯವಾದವಿತ್ತರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಅನುರಾಧ ಕೆ ರಾವ್ ಮತ್ತು ಬೆಳಿಯಪ್ಪ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್ ಎಸ್ ಎಲ್ ಸಿ ಫಲಿತಾಂಶ: ಮೂಡಿಗೆರೆ ತಾಲೂಕಿಗೆ ಎಳನೀರಿನ ಅಧಿತಿ ಪಿ ಜೈನ್ ಪ್ರಥಮ

Suddi Udaya

ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಮತ್ತು ಪ್ರಥಮ ವರ್ಷದ ಸಂಭ್ರಮ

Suddi Udaya

ಮಾ.30: ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿಯಿಂದ ಬರಾಯ ಭಜನಾ ಕಮ್ಮಟ ಉತ್ಸವ

Suddi Udaya

ದ.ಕ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಕೊರಗಪ್ಪ ನಾಯ್ಕ ಮುಂಡಾಜೆ ನೇಮಕ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 6ನೇ ಆರೋಪಿ ಮಹಮ್ಮದ್ ಶರೀಫ್ ನ್ನು ಬಂಧಿಸಿದ ಎನ್.ಐ.ಎ ಅಧಿಕಾರಿಗಳ ತಂಡ

Suddi Udaya

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

Suddi Udaya
error: Content is protected !!