23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಅಂಗಾಂಗ ದಾನ ನೋಂದಣಿ ಪ್ರಕ್ರಿಯೆ ಜೂ.9 ಬೆಳಿಗ್ಗೆಯಿಂದ ಅಂಗಾಂಗ ದಾನ ನೋಂದಣಿ, ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ಅಧ್ಯಕ್ಷ ದೇವದಾಸ್ ಕೆ ಸಾಲಿಯಾನ್ ಹೇಳಿಕೆ

ಬೆಳ್ತಂಗಡಿ: ಅಂಗಾಂಗ ದಾನವು ಯಾರಿಗಾದರೂ ಮತ್ತೆ ಸಂತೋಷದ ಜೀವನ ನಡೆಸಲು ಅವಕಾಶವನ್ನು ನೀಡುತ್ತದೆ. ಅಂಗಾಂಗಗಳನ್ನು ದಾನ ಮಾಡುವ ಕ್ರಿಯೆಯು ಗಮನಾರ್ಹ ಮತ್ತು ನಿಸ್ವಾರ್ಥ ಸೂಚಕವಾಗಿದೆ, ಇದು ಅಕ್ಷರಶಃ ಹತಾಶ ಅಗತ್ಯವಿರುವ ವ್ಯಕ್ತಿಗಳಿಗೆ ಜೀವಸೆಲೆಯಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯಿಂದ ಅಂಗಾಂಗ ದಾನಕ್ಕೆ ನೋಂದಣಿ ಪ್ರಕ್ರಿಯೆಯು ಜೂ‌9 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ ಎಂದು ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯ ಅದ್ಯಕ್ಷ ದೇವದಾಸ್ ಕೆ ಸಾಲಿಯಾನ್ ಹೇಳಿದರು.

ಅವರು ಜೂ3 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಳೆದ ಹಲವಾರು ವರ್ಷಗಳಿಂದ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯು ಸಮಾಜಮುಖಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದೆ. ಅಶಕ್ತರಿಗೆ ಆರೋಗ್ಯ ಕೀಟ್ ವಿತರಣೆ, ಮನೆ ದುರಸ್ತಿ ಮಾಡವ ಕೆಲಸ ಮಾಡಿದ್ದೇವೆ.ಊರಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ಶ್ರಮದಾನ ಸೇವೆ,ಅಕ್ಕಿ ವಿತರಣೆ,ವೃದ್ದಾಶ್ರಮಕ್ಕೆ ಸಹಕಾರ ಹಾಗೂ ಕಳೆದ 8 ವರ್ಷಗಳಿಂದ ಅಶಕ್ತ ಕುಟುಂಬಗಳಿಗೆ 3 ಮನೆ ನಿರ್ಮಿಸಿ ಕೊಟ್ಟ ಸಾರ್ಥಕತೆ, ಅನಾರೋಗ್ಯದಿಂದ ಬಳಲುತ್ತಿದ್ದ ಕುಟುಂಬಕ್ಕೆ ರೂ.15 ಲಕ್ಷ ಚಿಕಿತ್ಸಾ ವೆಚ್ಚ ನೀಡಿದ್ದೇವೆ ಎಂದರು.

ಜೂ 9 ರಂದು ಅಳದಂಗಡಿಯಲ್ಲಿ ನಡೆಯುವ ಪುಸ್ತಕ ವಿತರಣೆ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಅಂಗಾಂಗ ದಾನ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಇಗಾಗಲೇ 60 ಕ್ಕಿಂತ ಹೆಚ್ಚು ಜನರು ನೋಂದಣಿಗೆ ಒಲವು ತೋರಿಸಿದ್ದಾರೆ. ಜೊತೆಗೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ನಡೆಯಲಿದೆ. ಕೆ.ಎಂ.ಸಿ ಆಸ್ಪತ್ರೆಯ ನುರಿತ ವೈದ್ಯಕೀಯ ತಂಡ ಭಾಗವಹಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವ ಸಂಘಟನೆಯ ಸಂಘಟನಾ ಪ್ರಮುಖರಾದ ಸಂತೋಷ್ ಕಟ್ಟೆ,ವಿಶ್ವನಾಥ ಬಂಗೇರ, ಸುರೇಂದ್ರ ಕೋಟ್ಯಾನ್, ಪೂರ್ಣೇಶ್ ಕಾಪಿನಡ್ಕ ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯುವದಿನೋತ್ಸವ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಜೆಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಅನಾರು ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎ.29-30: ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನಕ್ಕೆ ಹಾಗೂ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀಮಜ್ಜಗದ್ಗುರುಗಳಾದ ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ

Suddi Udaya

ಮಡಂತ್ಯಾರು: ಚರಂಡಿಗೆ ಜಾರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya
error: Content is protected !!