ಬಂಗಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಬಂಗಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕಿನ ಜನಜಾಗೃತಿ ಅಧ್ಯಕ್ಷ ಖಾಸೀಂ ಮಲ್ಲಿಗೆಮನೆ ವಹಿಸಿದ್ದರು.
ಜನಜಾಗೃತಿ ವೇದಿಕೆಯ ಶಿಭಿರಾಧಿಕಾರಿ ದಿವಾಕರ ಪೂಜಾರಿ ಮಾತನಾಡಿ ತಂಬಾಕು ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು, ಚಿಕ್ಕ ಮಕ್ಕಳಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮನೆಯವರು ಮಾಡಬೇಕು, ಹೀಗಿದ್ದರೆ ಮಾತ್ರ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ತಾಲೂಕು ಜನಜಾಗೃತಿ ಪದಾಧಿಕಾರಿ ಶಶಿಧರ ಗೌಡ ಮನ್ನಡ್ಕ, ಬಂಗಾಡಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ, ನೂತನ ಅಧ್ಯಕ್ಷ ವಿಶ್ವನಾಥ ಗೌಡ, ಇಂದಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ನಾವೂರು ಗ್ರಾಮ ಸಮಿತಿ ಅಧ್ಯಕ್ಷ ಗೋವಿಂದ ಮೂಲ್ಯ, ವಲಯ ಮೇಲ್ವಿಚಾರಕಿ ಉಷಾ, ಸೇವಾಪ್ರತಿನಿಧಿ ಶೈಲಾ, ನಾವೂರು ಸೇವಾಪ್ರತಿನಿಧಿ ಸುನೀತ, ಸಂಘದ ಸದಸ್ಯರು ಭಾಗವಹಿಸಿದ್ದರು.