April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ:ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಒಳಗೊಂಡ ವಲಯ 15 ರ ಮಧ್ಯಂತರ ಸಮ್ಮೇಳನವು ಜೂನ್ 2ಕ್ಕೆ ವಿಟ್ಲದಲ್ಲಿ ನಡೆಯಿತು.

ಜೆಸಿಐ ಬೆಳ್ತಂಗಡಿಯು ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು, ರಸ್ತೆ ಸುರಕ್ಷತಾ ಅಭಿಯಾನ, ಹೆಲ್ಮೆಟ್ ಮೇಳ, ವಿಶ್ವ ಆರೋಗ್ಯ ದಿನ, ಯುವ ದಿನಾಚರಣೆ, ಮತದಾನದ ಜಾಗೃತಿ ಕಾರ್ಯಕ್ರಮ, ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದ ಕಾರ್ಯಕ್ರಮಗಳು, ಕ್ಯಾನ್ಸರ್ ಜಾಗೃತಿ ಪಿಂಕ್ ಮ್ಯಾರಥಾನ್ ಜಾಥ, ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಸಮಾಜಮುಖಿ ಕಾರ್ಯಕ್ರಮಗಳನ್ನೆಲ್ಲ ಗುರುತಿಸಿ ವಲಯ ಕೊಡ ಮಾಡುವ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ವಲಯದ ಹಿರಿಯ ಘಟಕಗಳಲ್ಲಿ ಒಂದಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಪಡೆದುಕೊಂಡಿದೆ.

ಇದರೊಂದಿಗೆ ಘಟಕವು ನಡೆಸಿದ ಕಾರ್ಯಕ್ರಮಗಳಿಗೆ ಅತ್ಯುತ್ತಮ Special Project Runner ಪ್ರಶಸ್ತಿ, Golden ಘಟಕ ಪ್ರಶಸ್ತಿ, ಜೆಸಿ ಮಿನುಗು ತಾರೆ ಪ್ರಶಸ್ತಿ, one star president ಪ್ರಶಸ್ತಿ, ತರಬೇತಿ ವಿಭಾಗದಲ್ಲಿ ಮಾರ್ಚ್ ತಿಂಗಳ excellence ಪ್ರಶಸ್ತಿ ಹಾಗೂ ವಲಯದ ಕಾರ್ಯಕ್ರಮಗಳಿಗೆ ಹಲವಾರು ಮನ್ನಣೆ ಗಳು ಲಭಿಸಿದೆ.

ವಲಯದಲ್ಲಿ ಅತ್ಯಂತ ಹಿರಿಯ ಮತ್ತು ಪ್ರತಿಷ್ಠಿತ ಘಟಕವಾದ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಅತ್ಯಂತ ಯಶಸ್ವಿಯಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುನ್ನಡೆಸುತ್ತಿರುವ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ರವರಿಗೆ ಯುವರತ್ನ ಹಾಗೂ ಕನಕ ಸಿಂಚನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಾಗೂ ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧೆಗಳಲ್ಲಿಯೂ ಕೂಡ ಯಶಸ್ವಿಯಾಗಿ ಭಾಗವಹಿಸಿದ ಜೆಸಿಐ ಬೆಳ್ತಂಗಡಿ ತಂಡಕ್ಕೆ ಕರುನಾಡ ವೈಭವದಲ್ಲಿ ಪ್ರಥಮ ಸ್ಥಾನ, ಬ್ಯಾನರ್ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಮತ್ತು ಫೋಟೋ ಪ್ರದರ್ಶನಗಳಲ್ಲಿ ಪ್ರಥಮ ಸ್ಥಾನವು ಲಭಿಸಿತು.

ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಚಂದ್ರಹಾಸ್ ಬಳಂಜ ಹಾಗೂ ಅನನ್ಯ ಜೈನ್ ಇವರಿಗೆ ಪ್ರಥಮ ಸ್ಥಾನ ಹಾಗೂ ಜೆಜೆಸಿ ವಿಭಾಗದಲ್ಲಿ ನೇವಿಲ್ ಮೋರಸ್ ರವರಿಗೆ ದ್ವಿತೀಯ ಸ್ಥಾನವು ಲಭಿಸಿತು. ಕಾರ್ಯಕ್ರಮದಲ್ಲಿ ನಿಕಟಪೂರ್ವಧ್ಯಕ್ಷರಾದ ಶಂಕರ್ ರಾವ್, ಕಾರ್ಯದರ್ಶಿ ಅನುದೀಪ್ ಜೈನ, ಮಹಿಳಾ ಜೆಸಿ ಸಂಯೋಜಕರಾದ ಶೃತಿ ರಂಜಿತ್, ಮಧ್ಯಂತರ ಸಮ್ಮೇಳನದ ಸಂಯೋಜಕರುಗಳಾದ ಚಂದ್ರಹಾಸ್ ಬಳಂಜ ಹಾಗೂ ಆಶಾ ಪ್ರಶಾಂತ್, ಘಟಕದ ಪೂರ್ವಧ್ಯಕ್ಷರುಗಳು, ಸದಸ್ಯರುಗಳು , ಜೆಜೆಸಿ ವಿಭಾಗದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದರು.

Related posts

ಹೊಕ್ಕಾಡಿಗೋಳಿ: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ “ಕರೆ” ಮುಹೂರ್ತ

Suddi Udaya

ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಮನೆಗೆ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಹರೀಶ್ ಪೂಂಜ ಭೇಟಿ

Suddi Udaya

ವಾಣಿ ಕಾಲೇಜು: ರೋವರ್‍ಸ್-ರೇಂಜರ್‍ಸ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ

Suddi Udaya

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾರು ಅಪಘಾತ: ಉಜಿರೆಯ ಸರೋಜಿನಿ ಶೆಟ್ಟಿ ಮೃತ್ಯು

Suddi Udaya

ರಕ್ಷಿತ್ ಶಿವರಾಂ ಬೆಂಗಳೂರಿನಿಂದ ಬೆಳ್ತಂಗಡಿಗೆ ಆಮದು ಆದ ನಾಯಕನಾದರೆ, ಬೆಂಗಳೂರಿನಲ್ಲಿದ್ದ ಹರೀಶ್ ಪೂಂಜ ಬೆಳ್ತಂಗಡಿಗೆ ಆಮದು ಆಗಿ ಚುನಾವಣೆಗೆ ನಿಲ್ಲಲಿಲ್ಲವೇ: ಧರಣೇಂದ್ರ ಕುಮಾರ್

Suddi Udaya
error: Content is protected !!