25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ನೀಟ್ ಟಾಪರ್ 720 ಅಂಕಗಳ ಪೈಕಿ 710 ಪಡೆದ ಪ್ರಜ್ವಲ್ ಗೆ ಸಂಸ್ಥೆಯ ವತಿಯಿಂದ ರೂ. 10 ಲಕ್ಷ ಕ್ಯಾಶ್ ಪ್ರೈಜ್ ಜೊತೆಗೆ ಗೌರವಾರ್ಪಣೆ

ಗುರುವಾಯನಕೆರೆ : ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್ ನಲ್ಲಿ 720 ಅಂಕಗಳ ಪೈಕಿ 710ಅಂಕ ಪಡೆದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಪ್ರಜ್ವಲ್ ಎಚ್.ಎಂ ಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ರೂ. 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ನ ಜೊತೆಗೆ ಗೌರವಾರ್ಪಣೆ ಸಲ್ಲಿಸಿದರು.

ಎಕ್ಸೆಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಚ್.ಎಂ, ಹೆತ್ತವರಾದ ಮರಿಸ್ವಾಮಿ ಎಚ್.ಎಂ., ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಎಂ, ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ಶಾಂತಿರಾಜ್ ಜೈನ್, ಪ್ರಾಧ್ಯಾಪಕರಾದ ಶ್ರೀನಿಧಿ ರಾಜ್, ನಿಶಾ ಪೂಜಾರಿ, ವಿಲ್ಸನ್ ತಳ್ತೊಟ್ಟಿ, ಕೇಶವ್ ರಾವ್, ಡಾ.ಸತ್ಯನಾರಾಯಣ್ ಭಟ್, ಈಶ್ವರ್ ಶರ್ಮಾ, ಜೈಸ ಆಂಟನಿ, ಚಿಗುರು ಪ್ರಕಾಶ್, ಗ್ರಿಷಿನ್ ಡಿಸೋಜ, ಡಾ. ಆಸ್ಟಿನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಿಚರ್ಡ್ ಜೀವನ್ ಮೊರಾಸ್ ಮತ್ತಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಘಾಟಿಯಲ್ಲಿ ಕಾರು ಅಪಘಾತ: ಉಜಿರೆಯ ಸರೋಜಿನಿ ಶೆಟ್ಟಿ ಮೃತ್ಯು

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ನಾಲ್ಕೂರು ಎ.ಬಿ ಒಕ್ಕೂಟದ ಪದಗ್ರಹಣ ಸಮಾರಂಭ: ನವಜೀವನ ಸಮಿತಿ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ

Suddi Udaya

ಬಳಂಜ: ಅಡಿಕೆ ಇಳುವರಿ ಹಾಗೂ ಕರಾವಳಿಯ ಹುಳಿ ಮಣ್ಣಿನ ಮೇಲೆ ಡೋಲೋಮೈಟ್’ ನ ಪ್ರಭಾವದ ಕುರಿತು ಕ್ಷೇತ್ರ ಪರಿಶೀಲನೆಯ ಕಾರ್ಯಕ್ರಮ

Suddi Udaya

ನಡ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರಾಜೀವಿರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya
error: Content is protected !!