26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುರ್ಯ ದೇವಸ್ಥಾನದ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ

ನಡ: ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಹಾಗೂ ಸುರ್ಯ ದೇವಸ್ಥಾನದ ಆಶ್ರಯದಲ್ಲಿ “ವಿಶ್ವ ಪರಿಸರ ದಿನ ” ಆಚರಿಸಲಾಯಿತು.

ಸುರ್ಯ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಸತೀಶ್ಚಂದ್ರ ಹಾಗೂ ವಿದ್ಯಾ. ಪಿ. ಡಿ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ ) ಇವರು ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯಕರಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅರಣ್ಯಧಿಕಾರಿ ಅಶೋಕ್, ಇಲಾಖೆ ಸಿಬ್ಬಂದಿ ಶೇಖರ ಗೌಡ, ನಡ ಪಂಚಾಯತ್ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಪ್ರಸಾದ್, ಸುಂದರ ನಾಯ್ಕ, ಪದ್ಮನಾಭ ಗೌಡ, ಯೋಗೀಶ್ ಪೂಜಾರಿ ಹಾಜರಿದ್ದರು. ಮಾವು, ಹೆಬ್ಬಲಸು, ಸಂಪಿಗೆ, ನೇರಳೆ, ಶ್ರೀಗಂಧ, ಸೊರಗೆ , ಹೊಳೆ ದಾಸವಾಳ ಇತ್ಯಾದಿ ವಿವಿಧ ಬಗೆಯ ನೂರು ಗಿಡಗಳನ್ನು ಸುರ್ಯ ದೇವಸ್ಥಾನದ ವಠಾರದಲ್ಲಿ ನೆಡಲಾಯಿತು.

Related posts

ಬಿರುಗಾಳಿ ಮಳೆ: ಚಾಮಾ೯ಡಿ ಅಡಿಮಾರು ಮೋಹನ ಪೂಜಾರಿಯವರ ಮನೆ ಹಾಗೂ ಹಟ್ಟಿಗೆ ಬಿದ್ದ ಮರ: ಅಪಾರ ನಷ್ಟ

Suddi Udaya

ಎನ್.ಇ.ಟಿ. ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಎಸ್‌ಡಿಎಂ ಮಹಾವಿದ್ಯಾಲಯ: ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಗೆ ಚಾಲನೆ

Suddi Udaya

ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರ ಮಾರಾಟ ಮಳಿಗೆ ಯೋಜನೆ

Suddi Udaya

ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

Suddi Udaya

ಉಜಿರೆ :ಶ್ರೀ.ಧ.ಮಂ.ವಸತಿ ಪ.ಪೂ. ಕಾಲೇಜಿನಲ್ಲಿ ಬಿತ್ತಿಪತ್ರ ಅನಾವರಣ ಕಾರ್ಯಕ್ರಮ

Suddi Udaya
error: Content is protected !!