28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿಜೆಪಿ ಮುಖಂಡ ರಾಜೇಶ್ ಕೊಲೆ ಯತ್ನ ಪ್ರಕರಣ: ಆರೋಪಿ ಕುಶಾಲಪ್ಪ ಗೌಡ ಬಂಧನ

ಬೆಳ್ತಂಗಡಿ : ಬಿಜೆಪಿ ಬೆಳ್ತಂಗಡಿ ತಾಲೂಕು ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷ, ರಾಜೇಶ್ ಎಂ.ಕೆ(33) ಮೇಲೆ ಜೂ.4 ರಂದು ರಾತ್ರಿ ಕೊಲೆ ಯತ್ನ ನಡೆಸಿದ ಆರೋಪಿ ಕುಶಾಲಪ್ಪ ಗೌಡರವರನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆಂಜ ಗ್ರಾಮದ ಕಾಯರ್ತಡ್ಕ ಕಾಂಗ್ರೆಸ್ ಮುಖಂಡ ಕಳೆಂಜ ನಿವಾಸಿ ಕುಶಾಲಪ್ಪ ಗೌಡ ಕಜೆ(48) ಎಂಬಾತನು ರಾಜೇಶ್ ಎಂ.ಕೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.5 ರಂದು ಆರೋಪಿ ಕುಶಾಲಪ್ಪ ಗೌಡ ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗಾಗಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಜೇಶ್.ಎಂ.ಕೆ ನೀಡಿದ ದೂರಿನ ಮೇರೆಗೆ ಅಟ್ರಾಸಿಟಿ, ಕೊಲೆ ಯತ್ನ, ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

Suddi Udaya

ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಹತ್ಯಡ್ಕ: ಹೊಸ್ತೋಟ ನಿವಾಸಿ, ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ನಿಧನ

Suddi Udaya

ಪಾಡ್ಯಾರು ಮಜಲು ರಾಜಗ್ರಹ ನಿವಾಸಿ ಶ್ರೀಮತಿ ವಿಮಲಾ ಡಿ’ ಪಾಂಡಿ ನಿಧನ

Suddi Udaya

ಸೇವಾಧಾಮ ಕಾರ್ಯ ಚಟುವಟಿಕೆಗಳಿಗೆ ದೇಣಿಗೆ ಸಂಗ್ರಹ

Suddi Udaya
error: Content is protected !!