ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ಪ್ರಥಮ ಪ.ಪೂ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಉಜಿರೆ: ಈ ಸಂಸ್ಥೆಯನ್ನು ಕಲಿಕೆಗೆ ಆಯ್ಕೆ ಮಾಡಿಕೊಂಡು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಬಂದಿರುವಿರಿ ನಿಮ್ಮೆಲ್ಲಾ ನಿರೀಕ್ಷೆಗಳು ಇಲ್ಲಿ ಈಡೇರಬಲ್ಲದು, ಜೊತೆಗೆ ಮುಂದಿನ ಭವಿಷ್ಯಕ್ಕೆ ಬೇಕಾದ ಸಹಾಯ, ಮಾರ್ಗದರ್ಶನವೂ ದೊರೆಯುವುದು, ಈ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಬಹಳಷ್ಟು ಉನ್ನತ ಹುದ್ದೆಯಲ್ಲಿ ಮುಂದುವರಿದಿರುವರು. ಶಿಕ್ಷಣದ ಜೊತೆಗೆ ಸಂಸ್ಕಾರದ ಜೀವನ ಮೌಲ್ಯಗಳನ್ನು ಕಲಿಸುತ್ತಿರುವ ಈ ಸಂಸ್ಥೆಯ ಮುಖಾಂತರ ನಿಮ್ಮೆಲ್ಲಾ ಆಶೋತ್ತರಗಳು ಈಡೇರಲಿ ಎಂದು ನಿನಾದದ ಸೋನಿಯಾವರ್ಮಾ ಅವರು ಹಾರೈಸಿದರು.

ಅವರು ಉಜಿರೆ ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಲ್ಲರೊಂದಿಗೆ ಮುನ್ನಡೆಯಲು ಶ್ರದ್ಧೆಯಿಂದ ಕೂಡಿದ ಕಲಿಕೆ ಅನಿವಾರ್ಯ, ಮನಸ್ಸನ್ನು ಏಕಾಗ್ರತೆಯಿಂದಿರಿಸಿ, ನಿತ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಭವಿಷ್ಯದ ಉತ್ತಮಿಕೆ ಸಾಧ್ಯವೆಂದು ಸಂಸ್ಥೆಯ ಐ.ಟಿ ಮತ್ತು ವಸತಿ ನಿಲಯಗಳ ಆಡಳಿತ ನಿರ್ವಹಣಾಧಿಕಾರಿ ಪೂರನ್ ವರ್ಮಾ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಕಾಲೇಜಿನ ಕುರಿತಾದ ಹೆಚ್ಚಿನ ವಿವರಗಳನ್ನು ವಿದ್ಯಾರ್ಥಿಗಳ ಮನಮುಟ್ಟಿಸಿದರು.
ವಸತಿ ನಿಲಯಗಳ ನಿಯಮಾವಳಿಗಳನ್ನು ಗಣಕಶಾಸ್ತ್ರದ ಉಪನ್ಯಾಸಕ ಪವಿತ್ರಕುಮಾರ್ ತಿಳಿಸಿದರು. ಕಾಲೇಜಿನ ಶೈಕ್ಷಣಿಕ ಚಟುವಟಿಕೆ ಕುರಿತು ಗಣಿತಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮಿ ವಿವರಿಸಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಮನೀಶ್ ಕುಮಾರ್, ದೈಹಿಕ ಮಾರ್ಗದರ್ಶಕರಾದ ಲಕ್ಷ್ಮಣ್ ಜಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಿತಶಾಸ್ತ್ರದ ಉಪನ್ಯಾಸಕಿ ಪ್ರಿಯ ಎಂ. ಹೆಚ್. ವಂದಿಸಿ ,ನಿರೂಪಿಸಿದರು.

Leave a Comment

error: Content is protected !!