20.5 C
ಪುತ್ತೂರು, ಬೆಳ್ತಂಗಡಿ
November 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿ

ದಾರುಸ್ಸಲಾಂ ಕ್ಯಾಂಪಸ್ಸ್ ನಲ್ಲಿ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಬೆಳ್ತಂಗಡಿ : ದಾರುಸ್ಸಲಾಂ ಕ್ಯಾಂಪಸ್ಸ್ ನಲ್ಲಿ ನಿರ್ಮಿಸಲಾದ ಶೈಖುನಾ ಕಾಡೇರಿ ಉಸ್ಥಾದ್ ಮೆಮೋರಿಯಲ್ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಸಮಾರಂಭವು ಜೂ 5 ರಂದು ದಾರುಸ್ಸಲಾಂ ಕ್ಯಾಂಪಸ್ಸಿನಲ್ಲಿ ನಡೆಯಿತು.


ದಾರುಸ್ಸಲಾಂ ಸಂಸ್ಥೆಯ ಯು ಎ ಇ ನ್ಯಾಷನಲ್‌ ಸಮಿತಿಯ ಸಂಪೂರ್ಣ ಸಹಾಯ ಹಾಗೂ ಸಹಕಾರದ ಫಲವಾಗಿ ದಾರುಸ್ಸಲಾಂ ಕ್ಯಾಂಪಸ್ಸಿನಲ್ಲಿ ಸುಂದರವಾದ ಬಹು ಅವಶ್ಯಕವಾದ ಇಸ್ಲಾಮಿಕ್ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ನ್ನು ನಿರ್ಮಿಸಿ ಉದ್ಘಾಟಿಸಲಾಯಿತು. ಬೆಳ್ತಂಗಡಿ ಜಮಾಅತಿನ ಹಾಗೂ ಇತರ ದಾನಿಗಳಾದ ಹಫೀಯ್ ಬೆಂಗಳೂರು ನೀಡಿದ 1 ಲಕ್ಷ ರೂಪಾಯಿಗಳ ಸಹಕಾರದಿಂದ ಪುಸ್ತಕಗಳನ್ನು ಸಂಗ್ರಹಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಿಲ್ರ್ ಜುಮಾ ಮಸೀದಿಯ ಅಧ್ಯಕ್ಷರಾದ ಬಿ ಎ ನಝೀರ್ರವರು ವಹಿಸಿದ್ದರು. ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನಿರ್ವಹಿಸಿದರು. ವೈಸ್ ಪ್ರಿನ್ಸಿಪಾಲ್ ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ದುಅ ನಿರ್ವಹಿಸಿದರು.


ಸಭೆಯಲ್ಲಿ ಸಯ್ಯಿದ್ ಇಸ್ಮಾಯಿಲ್ ತಂಙಳ್, ಅಬ್ದುಲ್ ರಶೀದ್ ಮಕ್ಕಾ, ಹನೀಫ್ ಫೈಝಿ ಖತೀಬರು ಕೆ ಜೆ ಎಂ ಬೆಳ್ತಂಗಡಿ, ಅಹ್ಮದ್ ಹುಸೈನ್ ಮೂಡಬಿದ್ರೆ ಕಾರ್ಯದರ್ಶಿ ದಾರುಸ್ಸಲಾಂ ಬೆಳ್ತಂಗಡಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಕೋಶಾಧಿಕಾರಿ ದಾರುಸ್ಸಲಾಂ ಬೆಳ್ತಂಗಡಿ, ಸದಸ್ಯರಾದ ಅಬ್ದುಲ್ ಹಮೀದ್ ಕಣ್ಣೂರು, ಯು ಕೆ ಮೋನಾಕ ಕಕ್ಕಿಂಜೆ, ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಅಯ್ಹುರಿ, ವೈದ್ಯಾಧಿಕಾರಿ ಡಾ.ನವಾಝ್ ಎನ್ ಎಸ್ ಅಬ್ದುಲ್ ರಹ್ಮಾನ್ ಬೆಳ್ತಂಗಡಿ, ಹನೀಫ್ ಶಿರ್ತಾಡಿ, ಸಂಸ್ಥೆಯ ಅಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ : ಅಕ್ರಮ ಮದ್ಯ ಮಾರಾಟ: ವಾಹನ ಸಹಿತ ರೂ. 3.31ಲಕ್ಷದ ಮದ್ಯ ವಶ

Suddi Udaya

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

Suddi Udaya

ನೆರಿಯದಲ್ಲಿ ಹಿಂದೂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತದೇಹವನ್ನು ಪಂಚಾಯತ್ ಎದುರಿನಲ್ಲಿಟ್ಟು ಪ್ರತಿಭಟನೆಗೆ ಸಿದ್ದತೆ: ಸ್ಥಳಕ್ಕೆ ತಹಶೀಲ್ದಾರರು ಬರಬೇಕು,ಇಂದೇ ಹಿಂದೂ ರುದ್ರಭೂಮಿಗೆ ಸ್ಥಳ ಮಂಜೂರುಗೊಳಿಸಬೇಕೆಂದು ಒತ್ತಾಯ

Suddi Udaya

ಶಿಶಿಲ: ಶಿವಕೀರ್ತಿ ನಿಲಯದಲ್ಲಿ‌ “ಹನುಮ‌ ಜಯಂತಿ” ಆಚರಣೆ

Suddi Udaya

ಪುಂಜಾಲಕಟ್ಟೆಯಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಮತ ಯಾಚನೆ

Suddi Udaya

ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

Suddi Udaya
error: Content is protected !!