ಉಜಿರೆ: ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ.
ಅ ಜಡೆಯನ್ನು ಕತ್ತರಿಸಿ ಕ್ಯಾನ್ಸರ್ ಪೀಡಿತರಿಗೆ ದಾನವಾಗಿ ನೀಡಿ ದ್ದಾರೆ ಉಜಿರೆ ಗ್ರಾಮದ ಮಾಚಾರು ನಿವಾಸಿ ನಾರಾಯಣ ನಾಯ್ಕ ಮತ್ತು ಸುಶೀಲಾ ದಂಪತಿಯ ಪುತ್ರಿ ದಿಕ್ಷೀತಾರವರು ತಲೆ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ನೆಲೆಯಿಂದ ದಾನ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ.
ಈ ವಿಶೇಷ ದಾನ ಇರುವುದು ಸತ್ ಚಿಂತನೆಯ ಸಮಾಜಮುಖಿ ನಡೆ. ನಾವು ಏನೇ ಕಲಿತರೂ ಅದು ಈ ಸಮಾಜದಿಂದಾನೆ ಕಲಿಯುವುದು, ಹೀಗಿರುವಾಗ ಸಮಾಜಕ್ಕೆ ನಾವು ನಮ್ಮಿಂದ ಸಾಧ್ಯವಿರುವ ಏನಾದರೊಂದನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಪ್ರೀತಿಯ ಕೂದಲನ್ನು ದಾನವಾಗಿ ನೀಡಿದ್ದಾರೆ.