ಉಜಿರೆ : “ಕೆಲಸದ ಒತ್ತಡವನ್ನು ಮಗುವಿನ ಮೇಲೆ ಹೇರಬೇಡಿ, ಮಕ್ಕಳಿಂದ ನಿರೀಕ್ಷೆಗಳಿರಲಿ ಆದರೆ ಅತಿಯಾದ ನಿರೀಕ್ಷೆ ಬೇಡ” ಎಂದು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಪಿ.ಜಿ ಸ್ಟಡೀಸ್ ಆಂಡ್ ರಿಸರ್ಚ್ ಇನ್ ಸೋಶಿಯಲ್ ವರ್ಕ್ ವಿಭಾಗದ ಉಪನ್ಯಾಸಕಿ ಡಾ.ಧಾನೇಶ್ವರಿ ಹೇಳಿದರು.
ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ 6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಅಕೊಲೆಟ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಇವರು ವಿದ್ಯಾರ್ಥಿಗಳ ಭಾಷ ಅಭಿವೃದ್ಧಿಯ ಕುರಿತು ಪೋಷಕರೊಂದಿಗೆ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿಷಯವಾರು ಶಿಕ್ಷಕರು ತಮ್ಮನ್ನು ಪರಿಚಯಿಸಿ, ಬೋಧನಾ ಶೈಲಿಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ಶಿಕ್ಷಕ ಜಾರ್ಜ್ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.