April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ಪೋಷಕರ ಸಭೆ

ಉಜಿರೆ : “ಬೆಳೆಯುತ್ತಿರುವ ಮಗುವಿನ ಮೇಲೆ ಒತ್ತಡ ಹೇರಬೇಡಿ, ಮಗುವನ್ನು ಪರಿಸರದೊಂದಿಗೆ ಬೆರೆಯಲು ಬಿಡಿ”ಎಂದು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅಶ್ವಿನಿ.ಎಸ್ ಶೆಟ್ಟಿ ಹೇಳಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪೋಷಕರೊಂದಿಗೆ ವಿಚಾರಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿಷಯವಾರು ಶಿಕ್ಷಕರು ತಮ್ಮನ್ನು ಪರಿಚಯಿಸಿ, ಬೋಧನಾ ಶೈಲಿಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಂಡರ್ಗಾರ್ಟನ್ ವಿಭಾಗದ ಸಂಯೋಜಕಿ ಸ್ಮೃತಿ ಜೈನ್ ವಹಿಸಿದ್ದರು.

ಶಿಕ್ಷಕಿ ವಿಜಯಲಕ್ಷ್ಮಿ. ಬಿ ಕಾರ್ಯಕ್ರಮ ನಿರೂಪಿಸಿ, ದಕ್ಷ ಸ್ವಾಗತಿಸಿ, ಕಿಂಡರ್ಗಾರ್ಟನ್ ವಿಭಾಗದ ಸಂಯೋಜಕಿ ಸ್ಮೃತಿ ಜೈನ್ ವಂದಿಸಿದರು.

Related posts

ಸಾಮಾಜಿಕ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ಕಳೆಂಜ ಗ್ರಾಮದ ಪುಜೇರಿಪಾಲ್ ಮೋನಪ್ಪ ಗೌಡರ ತೋಟಕ್ಕೆ ಕಾಡಾನೆ ದಾಳಿ

Suddi Udaya

ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯಾಂತ್ರಿಕ ಕಾರ್ಯಾಗಾರ

Suddi Udaya

ಲಾಯಿಲ : ಸವಣಾಲು ಆಯಿಲ ರಸ್ತೆಯ ಕತ್ಪಾಜೆಯಲ್ಲಿ ಗುಡ್ಡ ಕುಸಿತ: ಲಾಯಿಲ ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫಲಕ ಅಳವಡಿಕೆ: ಘನ ವಾಹನಗಳ ಸಂಚಾರ ನಿರ್ಬಂಧ

Suddi Udaya

“ನಾರಿ ಇನ್ ಪಿಂಕ್ ಸಾರಿ” ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮಕ್ಕೆ ಜೆಸಿಐ ಭಾರತದಿಂದ ಬೆಳ್ತಂಗಡಿ ಜೆಸಿಐ ಗೆ ವಿಶೇಷ ಮನ್ನಣೆ

Suddi Udaya
error: Content is protected !!