April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭವು ಜೂನ್ 8 ರಂದು ಸೇಕ್ರೆಡ್ ಹಾರ್ಟ್ ಸಮುದಾಯ ಭವನದಲ್ಲಿ ನಡೆಯಿತು.


ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಶಾಲಾ ಸಂಚಾಲಕರು ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ 2024-25 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸತತ ಪ್ರಯತ್ನದಿಂದ ಗೆಲುವನ್ನು ಸಾಧಿಸಬಹುದು ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ನೈನಾಡು ಚರ್ಚಿನ ಧರ್ಮಗುರುಗಳಾದ ವಂ|ಸ್ವಾ| ಅನಿಲ್ ಅವಿಲ್ಡ್ ಲೋಬೊ ಇವರು ಆಗಮಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳು ತಮ್ಮ ಜೀವನದಲ್ಲಿ ಕೆಲವು ಸೂತ್ರಗಳನ್ನು ಅನುಸರಿಸಬೇಕು, ಇದರಿಂದ ನಿಮ್ಮ ಜೀವನವು ಪರಿಪೂರ್ಣವಾಗುತ್ತದೆ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸತತ ಹನ್ನೆರಡು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ತಮ್ಮೆಲ್ಲರನ್ನು ಆಕಸ್ಮಿಕವಾಗಿ ಅಗಲಿದ ಶಿಕ್ಷಕಿ ಸುಜಾತ ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.


2023-24ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕವನ್ನು ಗಳಿಸಿದ ಅಲ್ವಿಟಾ ಡಿಸೋಜ, ನಂದನ್ ಪಿ ನಾಯಕ್ , ಗೌತಮಿ, ಜೊಸ್ಲಿನ್ ರಶ್ಮಿ ಡಿಸೋಜ, ಸ್ಪಂದನ ನಾಯಕ್, ರಿಶಾ ಕೊರೆಯ ಹಾಗೂ ಪ್ರಿಯಾ ಶಾಂತಿ ಫೆರ್ನಾಂಡಿಸ್ ಇವರನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.


ಶಾಲೆಗೆ ಹೊಸದಾಗಿ ನೇಮಕಗೊಂಡ ಶಿಕ್ಷಕ- ಶಿಕ್ಷಕಿಯರನ್ನು ಮತ್ತು ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೊ ಡೇಸ ಇವರು ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಸ್ ರವರು,ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಡಿಸೋಜ ರವರು,ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ವಿನ್ನಿ ಲೋಬೊ ರವರು ನಿರೂಪಿಸಿ, ಶ್ರೀಮತಿ ಜ್ಯೋತಿ ಫೆರ್ನಾಂಡಿಸ್ ರವರು ಸ್ವಾಗತಿಸಿ, ಶ್ರೀಮತಿ ಪ್ರಿನ್ಸಿಯಾ ಮಸ್ಕರೇನಸ್ ರವರು ಧನ್ಯವಾದಗಳನ್ನು ಸಮರ್ಪಿಸಿದರು .

Related posts

ಅಳದಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕನ್ಯಾಡಿ: ನೇರೋಳ್ ಪಲ್ಕೆ ಕೇಸರಿ ಗೆಳೆಯರ ಬಳಗದಿಂದ 11ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Suddi Udaya

ಶ್ರೀ ರಾಮಲಾಲ್ಲಾನ ಪ್ರಾಣ ಪ್ರತಿಷ್ಠೆ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಶ್ರೀ ರಾಮೋತ್ಸವ: ಸುರಕ್ಷಾ ಆಚಾರ್ಯ ರವರ ಕೈಚಳಕದಲ್ಲಿ ಸುಂದರವಾಗಿ ಮೂಡಿಬಂದ ರಾಮಮಂದಿರ

Suddi Udaya

ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆ

Suddi Udaya

2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

Suddi Udaya

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ನೂತನ ಸಮಿತಿ ರಚನೆ

Suddi Udaya
error: Content is protected !!