ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಶ್ವ ರಜೋನಿವೃತ್ತಿ (ಮೆನೋಪಾಸ್) ದಿನಾಚರಣೆಯ ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ಉಜಿರೆ : ವಿಶ್ವ ರಜೋನಿವೃತ್ತಿ ದಿನಾಚರಣೆಯ (ಮೆನೋಪಾಸ್ ದಿನ) ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಡಾ. ಭಾರತಿ ಗೋಪಾಲಕೃಷ್ಣ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ,ರಜೋನಿವೃತ್ತಿ (Menopause) ಎಂಬುದು ಚರ್ಚೆಯ ವಿಷಯವಲ್ಲ, ಗಂಭೀರ ಆರೋಗ್ಯ ಸಮಸ್ಯೆಯಲ್ಲ. ಇದು ಮಹಿಳೆಯರಲ್ಲಿ 45 ವರ್ಷ ವಯಸ್ಸಿನ ನಂತರ ಸಹಜವಾಗಿ ನಡೆಯುವ ಪ್ರಕ್ರಿಯೆ. ಮಹಿಳೆಯರು ರಜೋನಿವೃತ್ತಿಯ ನಂತರವೂ ನೋವಿಲ್ಲದೆ, ಚೈತನ್ಯಭರಿತವಾಗಿ ಬದುಕಬಹುದು — ಆದರೆ ಅದಕ್ಕಾಗಿ ಸರಿಯಾದ ಸಮಯದಲ್ಲಿ ತಕ್ಕ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಮುಖ್ಯ,” ಎಂದು ಹೇಳಿದರು.

ಡಾ. ಅಂಕಿತಾ (ಸ್ತ್ರೀರೋಗ ತಜ್ಞೆ ಹಾಗೂ ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ತಜ್ಞರು) ಅವರು ಮಾತನಾಡಿ, “ಮಹಿಳೆಯರು 40 ರಿಂದ 45 ವರ್ಷ ವಯಸ್ಸಿನ ನಂತರ ರಜೋನಿವೃತ್ತಿಯನ್ನು ಅನುಭವಿಸುತ್ತಾರೆ. ಇದು ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದ್ದು, ಇದನ್ನು ಸಮಸ್ಯೆಯೆಂದು ಭಾವಿಸಬಾರದು. ಈ ಅವಧಿಯಲ್ಲಿ ಅನೇಕ ಬದಲಾವಣೆಗಳು ಕಾಣಿಸಬಹುದು. ಸಮಯಕ್ಕೆ ಸರಿಯಾದ ತಪಾಸಣೆ ಮಾಡಿಸಿಕೊಂಡರೆ ಪರಿಹಾರ ದೊರೆಯುತ್ತದೆ. ರಜೋನಿವೃತ್ತಿ ಸಮಸ್ಯೆಯಲ್ಲ — ಪ್ರತಿ ಮಹಿಳೆಯೂ ಎದುರಿಸುವ ಒಂದು ಹಂತ. ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ, ನಾವು ಚಿಕಿತ್ಸೆಯನ್ನು ನೀಡುತ್ತೇವೆ,” ಎಂದು ಹೇಳಿದರು.

ಡಾ. ನವ್ಯಾ ಭಟ್ (ಸ್ತ್ರೀರೋಗ ತಜ್ಞೆ ಹಾಗೂ ಐವಿಎಫ್ ತಜ್ಞೆ) ಅವರು ಮಾತನಾಡಿ, “ಪ್ರತಿ ಮಹಿಳೆಯ ಸಮಸ್ಯೆಗೆ ಪರಿಹಾರ ಮತ್ತು ಚಿಕಿತ್ಸೆ ಇದೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಂಡರೆ ಮಾತ್ರ ನಾವು ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಇಂದಿನ ಉಚಿತ ಶಿಬಿರದ ಮೂಲಕ ನಾವು ಮಹಿಳೆಯರಿಗೆ ಪರಿಹಾರ ನೀಡುತ್ತಿದ್ದೇವೆ,” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆನಕ ಆಸ್ಪತ್ರೆಯ ಪಿಆರ್‌ಒ ಎಸ್. ಜಿ. ಭಟ್ ಅವರು ಸ್ವಾಗತಿಸಿ ವಂದಿಸಿದರು. ಬೆನಕ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ದೇವಸ್ಯ ವರ್ಗೀಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಮತ್ತು ಉಜಿರೆ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭಾಗಿ

Suddi Udaya

ಕರಾಯ ಕಲ್ಲೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ : ಉಪ್ಪಿನಂಗಡಿ ಪೊಲೀಸರ ದಾಳಿ‌ ನಗದು ಸಹಿತ ಐವರು ವಶಕ್ಕೆ

Suddi Udaya

ಗುರುವಾಯನಕೆರೆ ಸ. ಹಿ. ಪ್ರಾ. ಶಾಲೆಗೆ ಪುತ್ತೂರು ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಭೇಟಿ

Suddi Udaya

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ-ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ ಎಂ‌.ಜಿ ಶೆಟ್ಟಿಯವರಿಗೆ ನುಡಿನಮನ

Suddi Udaya

ಜೂ.21: ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ತರಬೇತಿ ಕಾರ್ಯಾಗಾರ

Suddi Udaya

ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya
error: Content is protected !!