April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಗೆ “ಜೊತೆಯಾಗಿ ಭವಿಷ್ಯವನ್ನು ಕಟ್ಟೋಣ” ಕಾರ್ಯಕ್ರಮ

ಉಜಿರೆ : “ಕೆಲಸದ ಒತ್ತಡವನ್ನು ಮಗುವಿನ ಮೇಲೆ ಹೇರಬೇಡಿ, ಮಕ್ಕಳಿಂದ ನಿರೀಕ್ಷೆಗಳಿರಲಿ ಆದರೆ ಅತಿಯಾದ ನಿರೀಕ್ಷೆ ಬೇಡ” ಎಂದು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಪಿ.ಜಿ ಸ್ಟಡೀಸ್ ಆಂಡ್ ರಿಸರ್ಚ್ ಇನ್ ಸೋಶಿಯಲ್ ವರ್ಕ್ ವಿಭಾಗದ ಉಪನ್ಯಾಸಕಿ ಡಾ.ಧಾನೇಶ್ವರಿ ಹೇಳಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ 6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಅಕೊಲೆಟ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಇವರು ವಿದ್ಯಾರ್ಥಿಗಳ ಭಾಷ ಅಭಿವೃದ್ಧಿಯ ಕುರಿತು ಪೋಷಕರೊಂದಿಗೆ ವಿಚಾರಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿಷಯವಾರು ಶಿಕ್ಷಕರು ತಮ್ಮನ್ನು ಪರಿಚಯಿಸಿ, ಬೋಧನಾ ಶೈಲಿಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ಶಿಕ್ಷಕ ಜಾರ್ಜ್ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.

Related posts

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಕೊಕ್ಕಡ ಶ್ರೀ ಕ್ಷೇತ್ರ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಐಡಿ ಕಾರ್ಡ್ ಮತ್ತು ಪ್ರೋತ್ಸಾಹ ಧನ ವಿತರಣೆ

Suddi Udaya

ಮಿತ್ತಬಾಗಿಲು:ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ

Suddi Udaya

ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ರ ಮಾತೃಶ್ರೀ ಸಿರಿಯಮ್ಮ ಹೊಸಂಗಡಿ ನಿಧನ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya
error: Content is protected !!