ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕೂಲಿ ಕಾರ್ಮಿಕರ ಸಮಸ್ಯೆಯನ್ನ ನೀಗಿಸುವುದು, ರೈತರಿಗೆ ತರಬೇತಿ, ಸರಕಾರಿ ಸೌಲಭ್ಯ ಗಳ ಒದಗಣೆ, ಉಳಿತಾಯದ ಮನೊಬಾವನೆ ಬೆಳೆಸುವುದು, ಕೃಷಿಗೆ ಉತ್ತೇಜನ, ಪರಸ್ಪರ ಸಹಕಾರದ ಮೂಲಕ ಶ್ರಮ ವಿನಿಮಯದ ಪರಿಕಲ್ಪನೆ ಮೂಡಿಸಿ ಸಂಘಟನೆಯ ಮೂಲಕ ಅಭಿವೃದ್ದಿ ಎಂಬ ಚಿಂತನೆ ಯೊಂದಿಗೆ 1982 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಜಾರಿಗೆ ತಂದ ಗ್ರಾಮಾಭಿವದ್ಧಿ ಯೋಜನೆಯ ಮೂಲಕ ರಚಿಸಿದ ಪ್ರಗತಿ ಬಂಧು ಗುಂಪುಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ ಎಂದು ದ. ಕ ಜಿಲ್ಲಾ ನಿರ್ದೇಶಕ ರಾದ ಮಹಾಬಲ ಕುಲಾಲ್ ಹೇಳಿದರು.

ಅವರು ಶ್ರೀ. ಕ್ಷೆ. ದ . ಗ್ರಾ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದ ಬಜಿರೆ ಒಕ್ಕೂಟದ ಪದಗ್ರಹಣ ಹಾಗು 19 ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಬಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .

ಪ್ರಗತಿ ಬಂಧು ಗುಂಪುಗಳ ಶ್ರಮ ವಿನಿಮಯದ ಮೂಲಕ ರೈತರು ತಮ್ಮ ಕೃಷಿ ಅಭಿವೃದ್ದಿಯನ್ನು ಮಾಡಿಕೊಳ್ಳುವುದರ ಮುಖೇನ ಅಭಿವೃದ್ದಿಯನ್ನ ಹೊಂದಿದ್ದಾರೆ ರೈತರಿಗೆ ಅರ್ಥಿಕ ಶಕ್ತಿಯನ್ನ ನೀಡಿರುವ ಪರಿಣಾಮ ಹಂತ ಹಂತವಾಗಿ ತಮ್ಮ ಕೃಷಿ ಭೂಮಿಯನ್ನು ಅಭಿವೃದ್ದಿ ಪಡಿಸಲು ಗುಂಪುಗಳು ಸಹಕಾರಿ ಆಗಿವೆ ರೈತರಲ್ಲಿ ಒಗ್ಗಟ್ಟು ಮೂಡಿದೆ ಆತ್ಮ ವಿಶ್ವಾಸ ಹೆಚ್ಚಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೃಷಿಯನ್ನು ಉಳಿಸಿ ಬೆಳೆಸಿ ಗ್ರಾಮೀಣ ಬಾಗದ ಬಡತನ ನಿರ್ಮೂಲನೆ ಮಾಡುವಲ್ಲಿ ಕಳೆದ 42 ವರ್ಷಗಳಿಂದ ಮಹತ್ತರ ಪಾತ್ರ ವಹಿಸಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ರಮೇಶ್ ಕೆ. ಸರ್ವಮಂಗಳ ಬಜಿರೆ, ನಿವೃತ್ತ ಶಿಕ್ಷಣ ಸಂಯೋಜಕ ರು ಬೆಳ್ತಂಗಡಿ ಇವರು ನೆರವೇರಿಸಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಬಾಸ್ಕರ್ ಪೈ ವೇಣೂರು, ಜನ ಜಾಗೃತಿ ವೇದಿಕೆ ಯ ನಿಕಟ ಪೂರ್ವ ವಲಯ ಅಧ್ಯಕ್ಷರಾದ ಹರೀಶ್ ಪೋಕ್ಕಿ, ಸತ್ಯ ನಾರಾಯಣ ಬಜನ ತುಂಬೆದ ಪಲ್ಕೆ ಮಂಡಳಿಯ ಅಧ್ಯಕ್ಷರಾದ ರಮೇಶ್ ಪೂಜಾರಿ, ಶ್ರೀ ವಿಘ್ನೇಶ್ವರ ಭಜನ ಮಂಡಳಿಯ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಲೂಕ್ ಜನ ಜಾಗೃತಿ ವೇದಿಕೆಯ ವೇಣೂರು ವಲಯದ ಅದ್ಯಕ್ಷರಾದ ಅಶೋಕ್ ಪೂಜಾರಿ, ಬಜಿರೆ ಒಕ್ಕೂಟದ ನೂತನ ಅಧ್ಯಕ್ಷರಾದ ಗಿರೀಶ್ ಕೆ ಕುಲಾಲ್, ಯೋಜನಾಧಿಕಾರಿ ದಯಾನಂದ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು

ಸಬಾ ಅಧ್ಯಕ್ಷತೆಯನ್ನು ಬಜಿರೆ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಜಯಶಂಕರ ಹೆಗ್ಡೆ ವಹಿಸಿದ್ದರು .ವಲಯ ಮೇಲ್ವಿಚಾರಕರಾದ ಶ್ರೀಮತಿ ಶಾಲಿನಿ, ಸೇವಾ ಪ್ರತಿನಿಧಿ ಗಳಾದ ಶ್ರೀಮತಿ ರೂಪಾ, ಹೊಸ ಪಟ್ನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ನಳಿನಿ ಹಾಜರಿದ್ದರು.

Leave a Comment

error: Content is protected !!