25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ: ಗುರುವಾಯನಕೆರೆ ಪೇಟೆಯಲ್ಲಿ ಲ| ಹೇಮಂತ ರಾವ್ ಯರ್ಡೂರ್ ರಿಂದ ಚಹಾ ವಿತರಣೆ

ಗುರುವಾಯನಕೆರೆ: ಸತತ 3ನೇ ಬಾರಿ ಭವ್ಯ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ದಿನವಾದ ಜೂ.9ರಂದು ಸಂಜೆ ಪ್ರಧಾನಿ ಮೋದಿಯವರ ಅಭಿಮಾನಿಯಾಗಿರುವ ಗುರುವಾಯನಕೆರೆಯ ರೂಪ ಕೇಟರರ‍್ಸ್ ಮಾಲಕ ಲ| ಹೇಮಂತ ರಾವ್ ಯರ್ಡೂರ್ ಅವರು ಗುರುವಾಯನಕೆರೆ ಬಸ್ ತಂಗುದಾಣದ ಬಳಿ ಮೂರನೇ ಬಾರಿಗೆ ಸಾರ್ವಜನಿಕರಿಗೆ ಟೀ ವಿತರಿಸಿದರು.

ನರೇಂದ್ರ ಮೋದಿಯವರು 2014 ಮತ್ತು 2019ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀರಿಸಿದ ದಿನದಂದು ಹೇಮಂತ ರಾವ್ ಅವರು ಗುರುವಾಯನಕೆರೆ ಪೇಟೆಯಲ್ಲಿ ಸಾರ್ವಜನಿಕರಿಗೆ ಚಹಾ ವಿತರಣೆ ಮಾಡಿದ್ದು, ಇದೀಗ ಮೂರನೇ ಬಾರಿಗೆ ಈ ಕಾರ್ಯವನ್ನು ಮಾಡಿರುವುದಾಗಿ, ತಿಳಿಸಿದ್ದಾರೆ .

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯೆ ಮಮತಾ ಶೆಟ್ಟಿ, ಕುವೆಟ್ಟು ಗ್ರಾಂ.ಪಂ ಮಾಜಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಗ್ರಾ.ಪಂ ಹಾಲಿ ಉಪಾಧ್ಯಕ್ಷ ಗಣೇಶ್ ಕೆ, ಸದಸ್ಯರಾದ ಮಂಜುನಾಥ ಕುಂಬ್ಲೆ, ಶ್ರೀಮತಿ ರಚನಾ ಭಟ್, ಮಾಜಿ ಸದಸ್ಯ ಪುರಂದರ ಶೆಟ್ಟಿ ಶಕ್ತಿನಗರ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಪ್ರಮುಖರಾದ ಕಾಂತಪ್ಪ ಮೂಲ್ಯ ಹಾಗೂ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಆ.30: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ಕುಕ್ಕಾವು ಕೊಪ್ಪಂದಗುಂಡಿಯಲ್ಲಿ ರಸ್ತೆಗೆ ಬಿದ್ದ ಮರ: ದ್ವಿಚಕ್ರ ಸವಾರರಿಗೆ ಗಾಯ

Suddi Udaya

ಸುದ್ದಿ ಉದಯ ‘ಬೆಳಕಿನ ಉದಯ’ ದೀಪಾವಳಿ ವಿಶೇಷಾಂಕ ಬಿಡುಗಡೆ: ಶ್ರೀರಾಮ‌ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯವರು ಬಿಡುಗಡೆಗೊಳಿಸಿ ಶುಭ ಹಾರೈಕೆ

Suddi Udaya

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಚಾರ್ಮಾಡಿ ಘಾಟಿನಲ್ಲಿ ಭಾರಿ ಬೆಂಕಿ ಅವಘಡ

Suddi Udaya

ಸುಣ್ಣದಕೆರೆ -ಶಕ್ತಿನಗರ ಸಂಪರ್ಕ ರಸ್ತೆ ದುರಸ್ಥಿಗೆ ಕುವೆಟ್ಟು ಗ್ರಾ.ಪಂ. ಸದಸ್ಯರಿಂದ ಆಗ್ರಹ

Suddi Udaya
error: Content is protected !!