April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಕೇಂದ್ರಗಳ ಭೇಟಿ

ಬೆಳ್ತಂಗಡಿ:- ಗುರುವಾಯನಕೆರೆ, ಇಲ್ಲಿನ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಕೇಂದ್ರಗಳ ಭೇಟಿ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಯಿತು.

ವಾಣಿಜ್ಯ ವಿಭಾದಲ್ಲಿ ಪ್ರಾಯೋಗಿಕ ಜ್ಞಾನವನ್ನು ನೀಡುವ ಸಲುವಾಗಿ ಮುತ್ತಿನ ನಗರಿ ಪುತ್ತೂರಿನ ಕೆಮ್ಮಿಂಜೆಯ ಕೋಕೋ ಕೃಷಿ ಪ್ರದೇಶದ ಮಧ್ಯದಲ್ಲಿ ಭಾರತದ ನೆಚ್ಚಿನ ಚಾಕೊಲೇಟ್ ಕಂಪನಿಯ ಕಾರ್ಖಾನೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಪೂರಕವಾಗಿ ಕಂಪೆನಿಯ ನಾನಾ ವಿಭಾಗಗಳ ತಂತ್ರಜ್ಞಾನವು ಸೇರಿದಂತೆ ಮಾರುಕಟ್ಟೆ, ಗ್ರಾಹಕ ವರ್ತನೆ, ಯೋಜನೆ – ವಿತರಣೆ ಹೀಗೆ ಹಲವಾರು ವಿಷಯಗಳ ಅಧ್ಯಯನವನ್ನು ನಡೆಸಿದರು.

ಕ್ಯಾಂಪ್ಕೋ ಸಂಸ್ಥೆಯ ಮಾರ್ಗದರ್ಶಕ ಸಿಬ್ಬಂದಿಯೋರ್ವರು ಮಾತನಾಡಿ, ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಯನ್ನು 1986 ರಲ್ಲಿ 8,800 ಮೆಟ್ರಿಕ್ ಟನ್ ಚಾಕೊಲೇಟ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಯಿತು. ಇಂದು ಇಲ್ಲಿ 23,000 ಟನ್‌ಗಳಷ್ಟು ಕೋಕೋ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ . ಅತ್ಯಂತ ಆಧುನಿಕ ಆಮದು ಮಾಡಿದ ಯಂತ್ರೋಪಕರಣಗಳೊಂದಿಗೆ ಸಜ್ಜುಗೊಂಡಿರುವ ಉತ್ಸಾಹಭರಿತ ಚಾಕೊಲೇಟ್ ಕಲಾವಿದರು ಕೋಕೋ ಮಾಸ್, ಕೋಕೋ ಪೌಡರ್, ಮೋಲ್ಡ್ ಚಾಕೊಲೇಟ್‌ಗಳು, ಪ್ರೀಮಿಯಂ ಚಾಕೊಲೇಟ್ ಬಾರ್‌ಗಳು ಮತ್ತು ಇತರ ಕೋಕೋ ಆಧಾರಿತ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಉತ್ಪಾದಿಸುತ್ತಾರೆ ಎಂದು ಮಾಹಿತಿ ನೀಡಿದರು.


ನಂತರ ವಿದ್ಯಾರ್ಥಿಗಳು ಸುಧಾರಿತ ಉಪಕರಣಗಳ ಬಳಕೆ ಮತ್ತು ಅದರಿಂದ ಉತ್ಪಾದನಾ ವಿಧಾನವನ್ನು ತಿಳಿಯುತ್ತಾ ಸಂತಸಪಟ್ಟರು.
ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಮಾತನಾಡಿ, ವಾಣಿಜ್ಯ ವಿಭಾಗದ ಮಕ್ಕಳಿಗೆ ವರ್ಷದ ಆರಂಭದ ದಿನಗಳಲ್ಲೇ ಈ ತರನಾದ ಪ್ರಾಯೋಗಿಕ ತರಬೇತಿ ಸಿಗುವಂತಾಗಬೇಕು, ಎಕ್ಸೆಲ್ ವಿದ್ಯಾಸಂಸ್ಥೆಯು ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ಸದಾ ಆದ್ಯತೆಯನ್ನು ನೀಡುತ್ತದೆ ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆಯವರು ಮಾತನಾಡಿ,ವಾಣಿಜ್ಯ ವಿಭಾಗದ ಕಲಿಕೆಯ ಆರಂಭದಲ್ಲೇ ಭವಿಷ್ಯದ ವೃತ್ತಿ ಜೀವನಕ್ಕೆ ಸದಾ ಪ್ರೋತ್ಸಾಹ ನೀಡಲು, ಅನುಭವವನ್ನು ಹೆಚ್ಚಿಸಿಕೊಳ್ಳಲು ಕೈಗಾರಿಕಾ ಭೇಟಿ ಕಾರ್ಯಕ್ರಮವು ಒಂದು ಮಹತ್ತರವಾದ ಹೆಜ್ಜೆಯಾಗಬಲ್ಲದು ಎಂದರು.


ಕಾಮರ್ಸ್ ವಿಭಾಗದ ಡೀನ್ ಸಂತೋಷ್ ರವರು, ವಾಣಿಜ್ಯ ವಿಭಾಗದ ಪ್ರಸನ್ನ, ರವಿ ಹಾಗೂ ಆಂಗ್ಲಭಾಷಾ ಶಿಕ್ಷಕಿ ಅರ್ಪಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಕಕ್ಕೆನೇಜಿ ವಾಸುದೇವ ರಾವ್ ಅವರ ಅಂಗಡಿಯಲ್ಲಿ ಎಲ್ಲರ ಗಮನ ಸೆಳೆದ ತೆಂಗಿನ ಕಾಯಿ

Suddi Udaya

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

Suddi Udaya

ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಬಿಸಾಡಿದ ಪ್ರಕರಣ: ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ನಡ ಪ್ರೌಢ ಶಾಲೆ ಹಾಗೂ ಕಾಲೇಜಿಗೆ ನುಗ್ಗಿದ ಕಳ್ಳರು: ಸಿಸಿ ಕ್ಯಾಮರ ಹಾಗೂ ದಾಖಲೆ ಪತ್ರಗಳಿಗೆ ಹಾನಿ

Suddi Udaya

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ನಿಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆ

Suddi Udaya
error: Content is protected !!