25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುತ್ಲೂರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರೈಮಾಸಿಕ ಸಭೆ ಹಾಗೂ ಮಂಜೂರಾತಿ ಪತ್ರ ವಿತರಣೆ

ಕುತ್ಲೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುತ್ಲೂರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬಿ ಇದರ ತ್ರೈಮಾಸಿಕ ಸಭೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿರ್ಗತಿಕರಿಗೆ ನೀಡುವ ಮಾಶಾಸನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ನಾರಾವಿ ವಲಯ ಮೇಲ್ವಿಚಾರಕಿ ಶ್ರೀಮತಿ ದಮಯಂತಿಯವರು ಮಾಶಾಸನ ಫಲಾನುಭವಿ ಶ್ರೀಮತಿ ಲೋಕಮ್ಮರವರಿಗೆ ಮಾಶಾಸನದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಯೋಜನೆಯು ಕೈಗೊಂಡಿರುವ ಸಮುದಾಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಅಣ್ಣಿ ಎಮ್.ಕೆ, ಸೇವಾ ಪ್ರತಿನಿಧಿ ಕೇಶವ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಬೆಳಾಲು: ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಿ.13ರಂದು ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ: ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವ

Suddi Udaya

ಪಾರೆಂಕಿ ಶ್ರೀ ನಾರಾಯಣ ಗುರು ಸೇವಾ ಸಂಘದ ನೂತನ ಸಮಿತಿ ರಚನೆ

Suddi Udaya

ಮಹಿಳೆಯ ಮೊಬೈಲನ್ನು ಕದ್ದು, ಫೋನ್ ಪೇ ಮೂಲಕ ಹಣ ವಂಚನೆ: ತನ್ನ ಸ್ನೇಹಿತರಿಗೆ ಹಣ ಕಳುಸಿದ್ದ ಆರೋಪಿ ವಿರುದ್ಧ ಕೇಸ್ ದಾಖಲು

Suddi Udaya

ಸೆ. 7: ಮಡಂತ್ಯಾರುವಿನಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ,ಧಾರ್ಮಿಕ ಕಾರ್ಯಕ್ರಮ

Suddi Udaya
error: Content is protected !!