26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

ಗರ್ಡಾಡಿ: ಇಲ್ಲಿನ ಬೋಳಿಯಾರ್ ನ ಗೋಪಕುಮಾರ್ ಮತ್ತು ಸುಮೇಶ್ ಕುಮಾರ್ ರವರಿಗೆ ಸೇರಿದ ಜಮೀನಿನ ಗೇಟಿನೆದುರು 25 ಮೇಕೆಯ ತಲೆ ಕಡಿದು ವಾಮಾಚಾರ ನಡೆಸಿರುವ ಘಟನೆ ಜೂ.10ರಂದು ಬೆಳಕಿಗೆ ಬಂದಿದೆ.

ಗೇಟಿನೆದುರು ಮೇಕೆಯ ತಲೆಗಳ ಜೊತೆ ಆ ಕುಟುಂಬದವರ ಫೋಟೋ, ಕೆಲಸದವರ ಫೋಟೋ, ಸಮಾಜದಲ್ಲಿರುವ ಪ್ರಮುಖರ ಫೋಟೋ ಬಳಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಜಾಗದ ವಿಚಾರದಲ್ಲಿಯೇ ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಗೋಪಕುಮಾರ್ ರವರಿಗೆ ಸೇರಿದ ಜಾಗವನ್ನು ಮಂಗಳೂರಿನ ರಾಜೇಶ್ ಎಂಬಾತ ಒಳಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದು, ಈ ಹಿನ್ನಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ ಎಂದು ಈ ಜಾಗದ ಮ್ಯಾನೇಜರ್ ಲಿಬಿನ್ ತಿಳಿಸಿದ್ದಾರೆ.

ಒಂದು ವಾರದ ಹಿಂದೆ 25 ಮೊಟ್ಟೆ, ಹಂದಿಯ ಮುಖ ಬಳಸಿ ವಾಮಾಚಾರ ಇದೇ ಜಾಗದಲ್ಲಿ ಮಾಡಿಸಿದ್ದರು. ಈಗ ಮತ್ತೆ ಮೇಕೆಯ ತಲೆ ಕಡಿದು ಹಾಕಿ ವಾಮಾಚಾರ ಮಾಡಿರುವುದು ಸ್ಥಳೀಯರು ಆತಂಕದಲ್ಲಿದ್ದಾರೆ.

Related posts

ಮಾ.9: ಬಂಗಾಡಿ ಕೊಲ್ಲಿಯಲ್ಲಿ ಯುವ ನಾಯಕ ರಂಜನ್ ಜಿ ಗೌಡರವರ ಸಾರಥ್ಯದಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ

Suddi Udaya

ಪಟ್ರಮೆ: ಪಾದೆಯಲ್ಲಿ ಧರೆ ಕುಸಿತ: ಮನೆಗೆ ಹಾನಿ

Suddi Udaya

ಕೊಕ್ಕಡ ಅಮೃತ ಗ್ರಾ. ಪಂ. ಹಾಗೂ ಅಮೃತ ಸರೋವರದಲ್ಲಿ ಸ್ವಾತಂತ್ರೋತ್ಸವ ಆಚರಣೆ: ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

Suddi Udaya

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya

ಕಲ್ಮಂಜ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲೇ ಪ್ರಥಮ

Suddi Udaya

ರೇಷ್ಮೆರೋಡ್: ಅಶ್ವತನಗರ ನವರಾತ್ರಿ ಪೂಜೆ

Suddi Udaya
error: Content is protected !!