26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ಯುವಜನ ಒಕ್ಕೂಟದಿಂದ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟ ಬೆಳ್ತಂಗಡಿ ಇದರ ಸಭೆಯು ಆ.27 ರಂದು ತಾಲೂಕು ಪಂಚಾಯತು ಸಭಾಭವನ ಬೆಳ್ತಂಗಡಿ ಇಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಯುವಜನ ಒಕ್ಕೂಟದ ಅಧ್ಯಕ್ಷರಾದ ರಮಾನಂದ ಸಾಲ್ಯಾನ್ ವಹಿಸಿ ತಾಲೂಕು ಯುವಜನ ಒಕ್ಕೂಟದ ಮೂಲಕ ಸ್ಥಳೀಯ ಯುವಕ-ಯವತಿ ಹವ್ಯಾಸಿ ಸಂಘಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆ ಹಾಗೂ ನಾಯಕ್ವತ ಶಿಬಿರಗಳನ್ನು ಏರ್ಪಡಿಸುವ ಬಗ್ಗೆ ಸಭೆಯಲ್ಲಿ ಸಲಹೆ ಇತ್ತರು.


ಮುಂದಿನ ಅಕ್ಟೋಬರ್ ತಿಂಗಳಲ್ಲಿ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟವನ್ನು ಉಜಿರೆ ಶ್ರೀ ಯುವಕ ಮಂಡಲ ಹಾಗೂ ಪ್ರಗತಿ ಯುವಕ ಮಂಡಲ ಮತ್ತು ಪ್ರಗತಿ ಯುವತಿ ಮಂಡಲ ಇವುಗಳ ಸಹಭಾಗಿತ್ವದಲ್ಲಿ ನಡೆಸುವುದಾಗಿ ನಿರ್ಧರಿಸಲಾಯಿತು.


ಒಕ್ಕೂಟದ ಬಲವರ್ಧನೆಗಾಗಿ ಗ್ರಾಮ ಮಟ್ಟದ ಸಂಘಟನೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಯುವಕ ಯುವತಿ ಮತ್ತು ಹವ್ಯಾಸಿ ಮಂಡಲಗಳ ಪದಾಧಿಕಾರಿಗಳಿಗೆ ವಸತಿ ಸಹಿತ ೨ ದಿವಸದ ನಾಯಕತ್ವ ತರಬೇತಿ ಶಿಬಿರವನ್ನು ಏರ್ಪಡಿಸುವುದಾಗಿಯೂ ಇದರ ಸಂಚಾಲಕರಾಗಿ ಚಿದಾನಂದ ಇಡ್ಯಾ ಇವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲ್ಯಾನ್ ಉಪಸ್ಥಿತರಿದ್ದು ಹೆಚ್ಚು – ಹೆಚ್ಚು ಯುವಕ – ಯುವತಿಯರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಇತ್ತರು.


ಮೊದಲಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಸದಾಶಿವ ಹೆಗ್ಡೆ ಸ್ವಾಗತಿಸಿ ಹಿಂದಿನ ಸಭಾ ವರದಿಯನ್ನು ಓದಿ ಸಭೆ ಅಂಗೀಕರಿಸಲಾಯಿತು. ಕೊನೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ಆನಂದ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು.

Related posts

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ವಿವಿಧ ಕ್ಷೇತ್ರಗಳ ಐದು ಮಂದಿ ಸಾಧಕರಿಗೆ ಗೌರವಾರ್ಪಣೆ

Suddi Udaya

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ವರದಿ ಸಾಲಿನಲ್ಲಿ ರೂ. 394.12 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.1.54 ಕೋಟಿ ಲಾಭ: ರಾಕೇಶ್ ಹೆಗ್ಡೆ

Suddi Udaya

ಮಚ್ಚಿನ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಈಶ್ವರ ದೇವರ ನೂತನ ಗರ್ಭಗೃಹದ ಶಿಲಾನ್ಯಾಸ

Suddi Udaya

ಗೇರುಕಟ್ಟೆ: ರಿಕ್ಷಾ ಚಾಲಕ ಎಂ.ಕೆ. ಶರೀಪುದ್ದೀನ್ ನಿಧನ

Suddi Udaya

ಪಟ್ರಮೆ: ಅನಾರು ನಿವಾಸಿ ಶ್ರೀಮತಿ ದೇವಕಿ ನಿಧನ

Suddi Udaya
error: Content is protected !!