31.1 C
ಪುತ್ತೂರು, ಬೆಳ್ತಂಗಡಿ
November 24, 2024
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತಿಗಾರರ ಸಂಘದ ಅಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ವಿ ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಆಯ್ಕೆ

ಬೆಳ್ತಂಗಡಿ : ಇಂದಿನ ಸ್ಪರ್ಧಾತ್ಮಕ ಭಜನೆಯಿಂದಾಗಿ ಮೂಲ ಭಜನೆಗೆ ಚ್ಯುತಿ ಬಂದು ಭಜನೆಯಲ್ಲಿ ವಿಭಜನೆಯಾಗಬಾರದು ಭಕ್ತಿಯ ಭಜನೆಯಲ್ಲಿಯೂ ಕೆಲವೊಂದು ನಿಯಮಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಭಜಕರಲ್ಲಿ ಮತ್ತು ತರಬೇತಿದಾರರುಗಳಲ್ಲಿ ಸಮನ್ವಯತೆ ವೃದ್ಧಿಯಾಗಬೇಕು ಎನ್ನುವ ದೂರದೃಷ್ಟಿಯೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಒಳಗಡೆ ಕುಣಿತ ಭಜನಾ ತರಬೇತಿ ನೀಡುತ್ತಿರುವ ತರಬೇತಿದಾರರುಗಳ ಪ್ರಥಮ ಸಭೆ ನಡೆಯಿತು.

ಈ ಸಭೆಯಲ್ಲಿ ಹಲವಾರು ವಿಚಾರಗಳನ್ನು ಚರ್ಚಿಸಿ ಮುಂದಿನ ದಿನಗಳಲ್ಲಿ ಭಕ್ತಿಯ ಭಜನೆಯಲ್ಲಿ ನಿರ್ದಿಷ್ಟವಾದ ಕೆಲವೊಂದು ನಿಯಮಗಳನ್ನು ಪಾಲಿಸುವುದಕ್ಕಾಗಿ ತಾಲೂಕಿನ ಒಳಗಡೆ ಕುಣಿತ ಭಜನಾ ತರಬೇತಿಯನ್ನು ನೀಡುತ್ತಿರುವ ತರಬೇತಿದಾರರುಗಳ ಸಂಘವನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಸಂದೇಶ್ ಮದ್ದಡ್ಕ , ಉಪಾಧ್ಯಕ್ಷರಾಗಿ ಕೃಷ್ಣಪ್ಪಗೌಡ ಅರಸಿನಮಕ್ಕಿ , ಕಾರ್ಯದರ್ಶಿಯಾಗಿ ಹರೀಶ್ ವಿ ನೆರಿಯ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ನೆರಿಯ, ಸಂಚಾಲಕರಾಗಿ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಮೊದಲಾದವರು ಆಯ್ಕೆಯಾಗಿ ಉಳಿದ ತರಬೇತಿದಾರರುಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು ಹಾಗೂ ಸಂಘಟನೆಯನ್ನು ಬಲಪಡಿಸುವುದಕ್ಕಾಗಿ ಹೆಚ್ಚಿನ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ನೂತನ ಸಮಿತಿಗೆ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಪರಿಷತ್ತಿನ ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜಿ, ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು. , ಸುರೇಂದ್ರ ಯೋಜನಾಧಿಕಾರಿ ಬೆಳ್ತಂಗಡಿ ವಲಯ. ಕೃಷಿ ಅಧಿಕಾರಿ ರಾಮ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಭಜನಾ ಪರಿಷತ್ತಿನ ಸಂಯೋಜಕರುಗಳು ಹಾಗೂ ತಾಲೂಕಿನ ಕುಣಿತ ಭಜನಾ ತರಬೇತಿ ನೀಡುತ್ತಿರುವ ಸಮಾನ ಮನಸ್ಕ ತರಬೇತಿದಾರರುಗಳು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರ ಅಧ್ಯಯನ ಪ್ರವಾಸ

Suddi Udaya

ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ ಬಿಎಂಎಸ್ ನ ವೆಹಿಕಲ್ ಯೂನಿಯನ್ ಸಂಘಗಳಿಂದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಮನವಿ

Suddi Udaya

ಪ್ರತಿಷ್ಠಿತ ಗಾಂಧಿಗ್ರಾಮ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ ಪ್ರಕರಣ: ನಾಲ್ವರನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನೋತ್ಸವ

Suddi Udaya
error: Content is protected !!