April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯ ಸಿಮ್ರಾ ಪರ್ವಿನ್ ಗೆ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

ಬೆಳ್ತಂಗಡಿ: ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಬೆಂಗಳೂರುನಲ್ಲಿ ಹಮ್ಮಿಕೊಂಡಿದ್ದ ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ’ ಕಾರ್ಯಕ್ರಮದಲ್ಲಿ 2024 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 617 ಅಂಕಗಳನ್ನು ಪಡೆದ ಬೆಳ್ತಂಗಡಿ ಸಂಜಯನಗರ
ಸಿಮ್ರಾ ಪರ್ವಿನ್ ಅವರನ್ನು ಕರ್ನಾಟಕ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು.

ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕ ( ಪಬ್ಲಿಕ್ ಪ್ರಾಸಿಕೂಟರ್) ಆಗಿರುವ ಮಹಮ್ಮದ್ ಶೌಕತ್ ಅಲಿ ಹಾಗೂ ಶಿಕ್ಷಕಿ ಸಫಿಯಾ ದಂಪತಿಯ ಪುತ್ರಿ ಯಾಗಿರುವ ಸಿಮ್ರಾ ಫರ್ವಿನ್ ಕಲಿಕೆ ಮತ್ತು ಕಲಿಕೇತರ ವಿಷಯದಲ್ಲೂ ಪ್ರತಿಭಾನ್ವಿತೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎನ್.ಎ ಹಾರೀಸ್, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಕ್, ಅತ್ತೂರು ಚಾಯಬ್ಬ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಘಾಟಿನಲ್ಲಿ ಭಾರಿ ಬೆಂಕಿ ಅವಘಡ

Suddi Udaya

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

Suddi Udaya

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Suddi Udaya

ಉಜಿರೆ ನೀರಚಿಲುಮೆ ಬಳಿ ಬೈಕ್ ಕಾರು ಅಪಘಾತ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya
error: Content is protected !!