April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ 3 ರ್‍ಯಾಂಕ್‌ಗಳು

ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಫೆಬ್ರವರಿ 2023 ರಲ್ಲಿ ನಡೆಸಿದ ಬಿ.ಎಡ್. ಪರೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ತೇಜಸ್ವಿ ಕೆ, ಶೇ. 89.38 ಅಂಕಗಳನ್ನು ಪಡೆದು 4ನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ.

ಪರೀಕ್ಷೆಗೆ ಹಾಜರಾದ ಎಲ್ಲಾ 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ.
ಹಾಗೆಯೇ ಫೆಬ್ರವರಿ 2024 ರಲ್ಲಿ ನಡೆದ ಬಿ.ಎಡ್. ಪರೀಕ್ಷೆಯಲ್ಲಿ ಪ್ರಶಿಕ್ಷಣಾರ್ಥಿ ಭವ್ಯ ಡಿ ನಾಯಕ್, ಶೇ. 88.96 ಅಂಕಗಳನ್ನು ಪಡೆದು 3ನೇ ರ್‍ಯಾಂಕ್‌ನ್ನು, ಮಂಜುಶ್ರೀ ಕೆ ನಾಯ್ಕ, ಶೇ.88.50 ಅಂಕಗಳನ್ನು ಪಡೆದು 7ನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೦5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ.


ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರನ್ನು ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್ ರವರು ಅಭಿನಂದಿಸಿರುತ್ತಾರೆ.

Related posts

ಪೆರಿಂಜೆ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya

ನಾರಾಯಣ ಅಭ್ಯಂಕರ್ ನಿಧನ

Suddi Udaya

ಸುಲ್ಕೇರಿ ಶ್ರೀರಾಮ‌ ಶಾಲೆಯಲ್ಲಿ ಔಷಧಿ ಸಸ್ಯಗಳ ಗಿಡನೇಡುವ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕದ ವಾರ್ಷಿಕೋತ್ಸವ, ಸನ್ಮಾನ

Suddi Udaya
error: Content is protected !!