28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಒಕ್ಕೂಟದ ಪದಗ್ರಹಣ

ಶಿರ್ಲಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕು ಅಳದಂಗಡಿ ವಲಯದ ಶಿರ್ಲಾಲು ಎ ಹಾಗೂ ಬಿ ಒಕ್ಕೂಟದ ಪದಗ್ರಹಣ ಸಮಾರಂಭವು ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ಲಾಲು ಈ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಲೋಕನಾಥೇಶ್ವರ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣರಾವ್ ನೆರವೇರಿಸಿ, ಪೂಜ್ಯ ಖಾವಂದರು ಗ್ರಾಮ ಅಭಿವೃದ್ಧಿ ಯೋಜನೆಯ ಮೂಲಕ ಉತ್ತಮ ಸಲಹೆ ಸೂಚನೆಗಳನ್ನು ಜನರಿಗೆ ತಲುಪಿಸುತ್ತಿರುವುದು ಅವಿಸ್ವರಣೀಯ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಮಾತನಾಡುತ್ತಾ,, ಗ್ರಾಮ ಅಭಿವೃದ್ಧಿ ಯೋಜನೆ ಪ್ರಾರಂಭದಲ್ಲಿ ಪ್ರಗತಿ ಬಂಧು ಸಂಘಗಳ ಪರಿಕಲ್ಪನೆಯನ್ನು ಪೂಜ್ಯ ಖಾವಂದರು ಯಾವ ಉದ್ದೇಶಕ್ಕಾಗಿ ಅನುಷ್ಠಾನ ಮಾಡಿದರು. ಅಂದಿನ ಜನರ ಜೀವನ ನಿರ್ವಹಣೆ ಯಾವ ರೀತಿಯಾಗಿ ಇತ್ತು. ಪ್ರಸ್ತುತ ಜನರ ಜೀವನದ ಸ್ಥಿತಿಗತಿಗಳಿಗೆ ಅನುಗುಣವಾಗಿ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಅಭೂತ ಪೂರ್ಣ ಬದಲಾವಣೆಗಳ ಬಗ್ಗೆ ಹಾಗೂ ವಿಶೇಷ ಅನುದಾನ ಕಾರ್ಯಕ್ರಮಗಳ ಬಗ್ಗೆ, ಒಕ್ಕೂಟದ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಶರರಾದ ಶ್ರೀಧರ್ ಪೂಜಾರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಲಾಲ್, ಪ್ರಗತಿ ಬಂಧು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಕೋಟ್ಯಾನ್ ಪಾಲನೆ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಶ್ ಕೆ. ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಸುಮಂಗಳ ರವರು ಸ್ವಾಗತಿಸಿ, ಸೇವಾ ಪ್ರತಿನಿಧಿಯಾದ ಚಂದ್ರಾವತಿಯವರು ಸಾಧನೆಯ ವರದಿಯನ್ನು ಮಂಡಿಸಿದರು. ಮನೋಹರ್ ರವರು ಕಾರ್ಯಕ್ರಮವನ್ನು ನಿರ್ವಹಿಸಿ, ಜನಜಾಗೃತಿ ಗ್ರಾಮ ಸಮಿತಿಯ ಸದಸ್ಯರಾದ ನೀಲಯ್ಯ ಗೌಡರು ವಂದಿಸಿದರು.

Related posts

ಚಾರ್ಮಾಡಿ ಘಾಟ್ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್‌ ಫೇಲ್ ಯಾಗಿ ಡಿವೈಡರ್ ಗೆ ಡಿಕ್ಕಿ

Suddi Udaya

ಮೇ.25: ಧರ್ಮಸ್ಥಳದಲ್ಲಿ ಹತ್ತನಾವಧಿ (ಪತ್ತನಾಜೆ) ಉತ್ಸವ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರದ ಆಭರಣಗಳ ಶೋರೂಮ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಮ್; ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ ದೀಪ ಪ್ರಜ್ವಲಿಸಿ ಲೋಕಾರ್ಪಣೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya

ಕನ್ಯಾಡಿ: ಪ್ರಗತಿಪರ ಕೃಷಿಕ ಬೊಲ್ಲೊಟ್ಟು ಬಾಬು ಶೆಟ್ಟಿ ನಿಧನ

Suddi Udaya
error: Content is protected !!