ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿ ಮಡಂತ್ಯಾರು, ಮದ್ದಡ್ಕ ಪಿಲಿಚಾಮುಂಡಿಕಲ್ಲು , ವಾಣಿ ಕಾಲೇಜು ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೂ.12ಂದು ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದರು.
ವಾಣಿ ಕಾಲೇಜು ಬಳಿ ಮಕ್ಕಳಿಗೆ ಹೋಗಲು ಸರ್ವಿಸ್ ರಸ್ತೆ, ಮೋರಿ ಅಗಲೀಕರಣ. ಮಕ್ಕಳಿಗೆ ನಿಲ್ಲಲು (ಜಿಎಸ್‌ಪಿ ) ಜಲ್ಲಿ ಹಾಕಿಕೊಡಬೇಕು. ಮೂಲಭೂತ ಸೌಲಭ್ಯ ಪಟ್ಟಣ ಪಂಚಾಯತ್ ನೀರು ಸರಬರಾಜು ಸರಿ ಮಾಡಿಕೊಡಬೇಕು.
ಈಗಾಗಲೇ ಬಹಳಷ್ಟು ಸಮಸ್ಯೆಯಾಗಿದೆ ಎಂದು ಪಟ್ಟಣ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಇಲಾಖೆಯ ಅಸಮ೯ಪಕ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೀರು ಸರಿಯಾಗಿ ಹೋಗುವಂತೆ, ಕಬ್ಬಿನ ರಾಡ್ ಕಾಣದಂತೆ ತಗಡು ಸೀಟು ಹಾಕಬೇಕು, ಏನಾದರೂ ಜನರಿಗೆ ಅನಾಹುತವಾದಲ್ಲಿ ಕ್ರಿಮಿನಲ್ ಕೇಸ್ ಹಾಕಲಾಗುವುದೆಂದು ಎಚ್ಚರಿಸಿದರು. ಬರುವ ಆದಿತ್ಯವಾರದ ಒಳಗೆ ಕೆಲಸವನ್ನು ಮುಗಿಸಿಕೊಡಬೇಕು ಇಲ್ಲವಾದಲ್ಲಿ ಬರುವ ಸೋಮವಾರ ಭೇಟಿ ನೀಡುತ್ತೇನೆ ಎಂದರು.
ಹೆದ್ದಾರಿಗೆ ಸಂಬಂಧಪಟ್ಟ ಪಟ್ಟಣ ಪಂಚಾಯತ್ , ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಆಡಳಿತ ಅಧಿಕಾರಿ ಮುಂತಾದವರು ಸೇರಿ ಒಂದು ಮೀಟಿಂಗ್ ಮಾಡಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್, ವಾಣಿ ಕಾಲೇಜು ಪ್ರಾಂಶುಪಾಲರು ಯದುಪತಿ ಗೌಡ, ವರ್ತಕರ ಸಂಘದ ಕಾರ್ಯದರ್ಶಿ ರೊನಾಲ್ಡ್ ಲೋಬೊ, ಸದಸ್ಯರಾದ ಲ್ಯಾನ್ಸಿಪಿಂಟೋ, ವಿನ್ಸೆಂಟ್ ಜೂಡೋ, ಪವರ್ ಆನ್ ಮಾಲಕರಾದ ಶೀತಲ್ ಜೈನ್, ಉದ್ಯಮಿ ಶಶಿಧರ ಪೈ ಮುಂತಾದವರೂ ಉಪಸ್ಥಿತರಿದ್ದರು.