ಉಜಿರೆ : ರತ್ನಮಾನಸ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ರತ್ನಮಾನಸ ‘ಜೀವನ ಶಿಕ್ಷಣ’ ವಸತಿ ನಿಲಯ ಇದರ ಪ್ರವೇಶ ದ್ವಾರ ಉದ್ಘಾಟನೆ ಹಾಗೂ 2024-25ನೇ ಸಾಲಿನ ಶೈಕ್ಷಣಿಕ ವರ್ಷದ 8ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಜೂ.12ರಂದು ನಡೆಯಿತು.

ಕಾರ್ಯಕ್ರಮವನ್ನು ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ನೂತನವಾಗಿ ಸೇರ್ಪಡೆಗೊಂಡ 8ನೇ ತರಗತಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರು ಮಾತನಾಡಿ 52 ವರ್ಷಗಳ ಇತಿಹಾಸ ರತ್ನಮಾಸಕ್ಕಿದ್ದು, ಇಲ್ಲಿಗೆ ಬರುವಂತಹ ಗಣ್ಯರುಗಳು ವಿದ್ಯಾರ್ಥಿಗಳ ಕೆಲಸವನ್ನು ನೋಡಿ ಹೊಗಳಿದ್ದಾರೆ. ಪೋಷಕರು ತಮ್ಮ ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಗಲಾಗಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಸೇರಿಸುತ್ತಾರೆ. ಅವರ ಕನಸನ್ನು ನನಸಾಗಿಸುವ ಕೆಲಸ ವಿದ್ಯಾರ್ಥಿಗಳಾದ ನಿಮ್ಮ ಕರ್ತವ್ಯ. ಎಸ್.ಡಿ.ಎಂ. ಕನ್ನಡ ಮಾಧ್ಯಮ ಶಾಲೆಗೆ ಈ ಬಾರಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಸ್ಪೀಕ್ ಫಾರ್ ಇಂಡಿಯಾದಲ್ಲಿ ಪ್ರಥಮ ಸ್ಥಾನ ಪಡೆದಂತಹ ರತ್ನಮಾಸದ ಹಿರಿಯ ವಿದ್ಯಾರ್ಥಿ ಶಾಮಪ್ರಸಾದ್ ರವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ್ಚಂದ್ರ, ಐ ಟಿ ಹಾಗೂ ಆಸ್ಟೆಲ್ ವಿಭಾಗದ ಸಿ ಇ ಒ ಪೂರಣ್ ವರ್ಮ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಪಾಲಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಶಾಮಪ್ರಸಾದ್ ನಿರೂಪಿಸಿದರು. 10ನೇ ತರಗತಿ ವಿದ್ಯಾರ್ಥಿ ಪ್ರೀತಮ್ ಸ್ವಾಗತಿಸಿ, 9ನೇ ತರಗತಿ ವಿದ್ಯಾರ್ಥಿ ನಿಶಿತ್ ಧನ್ಯವಾದವಿತ್ತರು.

Leave a Comment

error: Content is protected !!