24.8 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿ ಕೆ ಹನೀಫ್ ಪುನರಾಯ್ಕೆ

ಬೆಳ್ತಂಗಡಿ: ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಮಹಾಸಭೆಯಲ್ಲಿ 2024-25ನೇ ಸಾಲಿನ ಅಧ್ಯಕ್ಷರಾಗಿ ಕೆ ಹನೀಫ್, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಸಖಾಫಿ ಕನ್ಯಾಡಿ, ಕೋಶಾಧಿಕಾರಿಯಾಗಿ ಅಬುಸಾಲಿ ಕೇಲ್ತಾಜೆ ಪುನರಾಯ್ಕೆಯಾದರು.

ಸಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಮುರ ತೀರ್ಥಹಳ್ಳಿ ಇವರು ಗೌರವಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಉಪಾಧ್ಯಕ್ಷರಾಗಿ ಹಮೀದ್ ಕೆ.ಬಿ ಹಾಗೂ ಸದಸ್ಯರಾಗಿ ಅಬ್ದುಲ್ ಹಮೀದ್ ಟಿ, ಮಹಮ್ಮದ್ ಯು.ಕೆ, ಅಬೂಬಕ್ಕರ್ ಬಿ.ಎ, ಉಮರ್ ಫಾರೂಕ್ ಬಿ, ಮಹಮ್ಮದ್ ಪಾರ್ನಡ್ಕ, ಇಸುಬು ಬಿ.ಎ, ಅಶ್ರಫ್ ಪಾರ್ನಡ್ಕ, ಇವರನ್ನು ಮರು ಆಯ್ಕೆ ಮಾಡಲಾಯಿತು.

ಲೆಕ್ಕಪರಿಶೋದಕರಾಗಿ ಶಮೀಮ್ ಪಾರ್ನಡ್ಕ ಇವರನ್ನು ಮುಂದುವರೆಸಲಾಯಿತು. ಅಬುಸಾಲಿ ಝೈನಿ ದುಆ ನೆರವೇರಿಸಿದರು. ಕಾರ್ಯದರ್ಶಿ ಶರೀಫ್ ಸಖಾಫಿ ಸ್ವಾಗತಿಸಿ ವರದಿ ವಾಚಿಸಿದರು. ಹಮೀದ್ ಟಿ ಲೆಕ್ಕಪತ್ರ ಮಂಡಿಸಿದರು. ಇಸಾಕ್ ಮುಸ್ಲಿಯಾರ್ ಧನ್ಯವಾದವಿತ್ತರು.


Related posts

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya

ಇಂದಬೆಟ್ಟು: ಕುಡಿಯುವ ನೀರಿಗಾಗಿ ಗ್ರಾ.ಪಂ. ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ರಿಂದ ಪಂಚಾಯತ್ ಎದುರು ಪ್ರತಿಭಟನೆ: ಶೀಘ್ರವಾಗಿ ದುರಸ್ತಿ ಮಾಡಿಸಿಕೊಡುವುದಾಗಿ ಗ್ರಾ.ಪಂ. ಅಧ್ಯಕ್ಷೆ ಭರವಸೆ

Suddi Udaya

ವಾಣಿ ಪ.ಪೂ. ಕಾಲೇಜಿನ ರಿತ್ವಿಕ್ ಶೆಟ್ಟಿ ಏಕಪಾತ್ರ ಅಭಿನಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

Suddi Udaya
error: Content is protected !!