22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಣಿಯೂರು ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

ಕಣಿಯೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಣಿಯೂರು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.


ತರಬೇತಿಯ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕ ಮಹಾಬಲ ಉದ್ಘಾಟಿಸಿ ಮಾತನಾಡುತ್ತಾ ಒಕ್ಕೂಟದ ಪದಾಧಿಕಾರಿಗಳು ತಮಗೆ ನೀಡಲಾದ ಜವಾಬ್ದಾರಿ ಗುಂಪುಗಳ ಪರಿಚಯ ಮಾಡಿಕೊಳ್ಳಬೇಕು. ಗುಂಪುಗಳ ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ಅವುಗಳನ್ನು ಕಾರ್ಯಕರ್ತರ ಸಹಕಾರದ ಮೂಲಕ ಸರಿಪಡಿಸಬೇಕು.
ಒಕ್ಕೂಟದ ಮಾಸಿಕ ಸಭೆಗಳಿಗೆ ಗುಂಪಿನ ಸದಸ್ಯರು ಸಾಲದ ಬೇಡಿಕೆ ಗಳನ್ನು ಸಲ್ಲಿಸಬೇಕು ಒಕ್ಕೂಟ ಸಭೆ ಆದ ಬಳಿಕ ಉಪಸಮಿತಿ ಸಭೆಯನ್ನು ನಡೆಸಿ ಗುಂಪಿನ ಗುಣಮಟ್ಟ ಸದಸ್ಯರ ಮರು ಪಾವತಿ ಸಾಮರ್ಥ್ಯ ಪರಿಗಣಿಸಿ ಸಮರ್ಪಕ ವಾಗೀ ಚರ್ಚಿಸಿ ಸಾಲ ಬಿಡುಗಡೆಗೆ ಶಿಫಾರಸ್ಸು ಮಾಡಬೇಕು ಎಂದರು.


ಒಕ್ಕೂಟದ ವಾರ್ಷಿಕ ಬಜೆಟ್ ತಯಾರು ಮಾಡಿ ಅನುಷ್ಟಾನ ಮಾಡಬೇಕು ಇವುಗಳಲ್ಲಿ ಮುಖ್ಯವಾಗಿ ಶಾಲಾ ಕೈ ತೋಟ, ಸ್ವಚ್ಛತಾ ಕಾರ್ಯಕ್ರಮ, ಪರಿಸರ ಕಾರ್ಯಕ್ರಮ, ಹೊಸ ಗುಂಪು ರಚನೆ, ಶ್ರಮದಾನ, ಕೃಷಿ ತರಬೇತಿ, ಅಧ್ಯಯನ ಪ್ರವಾಸ, ಗಿಡಗಳ ನಾಟಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ನೀರಾವರಿ ಸೌಲಭ್ಯ, ಸಮುದಾಯ ಅಭಿವೃದ್ಧಿ ಕಾರ್ಯಗಳು ಮೊದಲಾದವುಗಳನ್ನು ಪರಿಗಣಿಸಬೇಕು ಎಂದು ವಿವರಿಸಿದರು.


ಉಡುಪಿ ಪ್ರಾದೇಶಿಕ ವಿಭಾಗದ ಕಚೇರಿ ತಪಾಸಣಾ ವಿಭಾಗದ ಯೋಜನಾಧಿಕಾರಿ ಅಮರ್ ಪ್ರಸಾದ್, ಸಮನ್ವಯಧಿಕಾರಿ ಶ್ರೀಮತಿ ಹೇಮಲತಾ, ರುಡ್ ಸೆಟ್ ಸಂಸ್ಥೆಯ ಉಷಾ ಸಮಾಜ್ ತರಬೇತಿಯನ್ನು ನಡೆಸಿಕೊಟ್ಟರು.
ತಾಲೂಕ್ ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯ ಮೇಲ್ವಿಚಾರಕರಾದ ಶಿವಾನಂದ, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.


ವಲಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದರು

Related posts

ತಣ್ಣೀರುಪಂತ: ಅಳಕೆ ಎಂಬಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧ ಸಾವು : ಕೊಲೆಯೇ, ಆತ್ಮಹತ್ಯೆಯೇ ಪೊಲೀಸರ ತನಿಖೆ

Suddi Udaya

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ| ಆದಂ ಉಸ್ಮಾನ್ ನಿಧನ

Suddi Udaya

ಮಡಂತ್ಯಾರು: ಹೊಂಡಗಳಿಂದ ಹದಗೆಟ್ಟ ರಸ್ತೆ: ಬಿಎಂಎಸ್ ರಿಕ್ಷಾ ಚಾಲಕರಿಂದ ಹೊಂಡ ಮುಚ್ಚುವ ಕಾರ್ಯ

Suddi Udaya

ಹೊಸ ವರ್ಷದ ಪ್ರಯುಕ್ತ ವಿಶೇಷ ಫಲಪುಷ್ಪಗಳಿಂದ ಅಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ

Suddi Udaya

ಮೇ .17, 18, 19: ಬೆಳ್ತಂಗಡಿ ಸ್ಪಂದನ ಪಾಲಿಕ್ಲಿನಿಕ್ & ಲ್ಯಾಬೋರೇಟರಿ ಹಾಗೂ ಸ್ಪಂದನ ಕ್ಲಿನಿಕ್ ನಲ್ಲಿ ಉಚಿತ ಹಾಗೂ ವಿಶೇಷ ರಿಯಾಯಿತಿ

Suddi Udaya
error: Content is protected !!