25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಹಕಾರದೊಂದಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ತಾಲೂಕಿನಲ್ಲಿ 500 ಎಕ್ರೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿ

ಒಂದು ಕಾಲದಲ್ಲಿ ಭತ್ತ ಕೃಷಿಯನ್ನು ಹೊರತುಪಡಿಸಿ ಯಾವುದೇ ಕೃಷಿಯನ್ನು ಮಾಡದೆ, ಪ್ರತಿಯೊಬ್ಬ ರೈತನು ಕೂಡ ಭತ್ತ ಕೃಷಿಯನ್ನು ಮಾಡಿ ತನ್ನ ಜೀವನವನ್ನು ನಡೆಸುತ್ತಿದ್ದು ಇಂದು ಹೆಚ್ಚಿನ ರೈತರು ವಾಣಿಜ್ಯ ಕೃಷಿ ಅಡಿಕೆ, ರಬ್ಬರ್ ಇನ್ನಿತರ ಏಕಮುಖ ಬೆಲೆಯನ್ನು ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಭತ್ತ ಕೃಷಿಕರ ಸಂಖ್ಯೆ ಕಡಿಮೆಯಾಗಿ ಭತ್ತದ ಗದ್ದೆಯು ಕೂಡ ಇಂದು ಅಡಿಕೆ ತೋಟವಾಗಿ ಪರಿವರ್ತನೆಗೊಳ್ಳುತ್ತಿದ್ದು, ಇದನ್ನು ಅರಿತುಕೊಂಡ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಭತ್ತ ಕೃಷಿಯನ್ನು ಉಳಿಸಬೇಕು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಭಾವನೆಯೊಂದಿಗೆ ಕೂಲಿ ಆಳುಗಳ ಸಮಸ್ಯೆಯಿಂದ ಭತ್ತ ಕೃಷಿಯರು ಭತ್ತ ಕೃಷಿ ಮಾಡುವುದನ್ನು ಕಡಿಮೆ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಮಾಡಿದಾಗ ಹೆಚ್ಚಿನ ರೈತರು ಬೀಜದಿಂದ ಬೀಜದವರೆಗೆ ಯಂತ್ರದ ಮೂಲಕವಾಗಿ ನಾಟಿಯನ್ನು ಮಾಡಿ, ಭತ್ತ ಕೃಷಿಯನ್ನು ಉಳಿಸಲು ಸಾಧ್ಯವಿದೆ ಎನ್ನುವ ಚಿಂತನೆಯೊಂದಿಗೆ, ಸರಕಾರದ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆಯನ್ನು ಪ್ರಾರಂಭಿಸಿದ್ದು ಸುಮಾರು 10 ವರ್ಷಗಳಿಂದ ನಿರಂತರವಾಗಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹವನ್ನು ನೀಡಿದ್ದು, ಇದರಿಂದ ಕೂಲಿ ಆಳುಗಳ ಸಮಸ್ಯೆಯೇ ಇಲ್ಲದೆ ನಿಗದಿತ ಸಮಯದಲ್ಲಿ ನಾಟಿಯನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಇಂದು ಭತ್ತ ಕೃಷಿಕರು ಈ ಯಂತ್ರಶ್ರೀ ಕಾರ್ಯಕ್ರಮದಿಂದ ಪಡೆಯುತ್ತಿದ್ದು,ಇಂದು ಯಂತ್ರಶ್ರೀ ಯೋಜನೆಯ ಮೂಲಕವಾಗಿ ತಾಲೂಕಿನಲ್ಲಿ 500 ಎಕ್ರೆ ಪ್ರದೇಶಗಳಲ್ಲಿ ಮುಂಗಾರಿಗೆ ಯಂತ್ರಶ್ರೀ ಅಂದರೆ ಯಂತ್ರದ ಮೂಲಕ ಭತ್ತನಾಟಿ ಮಾಡಲು ಇದೀಗಾಗಲೇ ರೈತರು ತಯಾರಿಯನ್ನು ಮಾಡಿಕೊಂಡಿದ್ದಾರೆ.

ಯಾಂತ್ರಿಕೃತ ಭತ್ತ ಬೇಸಾಯ ಮಾಡುವ ರೈತರಿಗೆ ಮನೆ ಬಾಗಿಲಿಗೆ ಭೇಟಿ ನೀಡಿ ಸಂಪೂರ್ಣವಾದ ಪ್ರಾತ್ಯಕ್ಷಿತ ಮಾಹಿತಿ, ಯಂತ್ರದ ಮೂಲಕ ಭತ್ತ ಬೇಸಾಯ ಮಾಡುವುದಾದರೆ ತಾಲೂಕಿನಲ್ಲಿ ಒಬ್ಬರು ಯೋಜನೆಯ ವತಿಯಿಂದ ಕೃಷಿ ಮೇಲ್ವಿಚಾರಕರಿದ್ದು ಇವರು ಯಂತ್ರಶ್ರೀ ಮಾಡುವ ರೈತರ ಮನೆಯ ಭೇಟಿಯನ್ನು ಮಾಡಿ ಬೀಜದ ಆಯ್ಕೆ, ಭತ್ತದ ಬೀಜೊಪಚಾರ,ಸಸಿ ಮಡಿ ತಯಾರಿ,ಯಂತ್ರದ ಮೂಲಕ ನಾಟಿ,ಗೊಬ್ಬರ ನೀಡುವಿಕೆ, ಮತ್ತು ರೋಗ,ಕೀಟಗಳ ಹಾಗೂ ಹುಳದಬಾದೆ ನಿಯಂತ್ರಣದ ಬಗ್ಗೆ ಸಕಾಲದಲ್ಲಿ ರೈತರ ಮನೆ ಬಾಗಿಲಿಗೆ ಭೇಟಿ ನೀಡಿ ಮಾಹಿತಿಯನ್ನು ಉಚಿತವಾಗಿ ನೀಡುತ್ತಾರೆ ಎಂದು ಯೋಜನಾಧಿಕಾರಿ ಸುರೇಂದ್ರ ತಿಳಿಸಿದರು.

ಟ್ರ್ಯಾಕ್ಟರ್ ನ ಮೂಲಕ ಉಳುಮೆ ಮತ್ತು ನಾಟಿ ಯಂತ್ರದ ಮೂಲಕವಾಗಿ ನಾಟಿ ಮಾಡಿದಾಗ ರೈತರಿಗೆ GST ಬಿಲ್.
ರೈತರು ಬೆಳೆಯಲ್ಲಿ ಯಾವುದೇ ನಷ್ಟವನ್ನು ಅನುಭವಿಸಿದಾಗ ರೈತ ತಾನು ಭತ್ತ ಕೃಷಿಯನ್ನು ಮಾಡಿದ ಆಧಾರಕ್ಕಾಗಿ ಆ ವರ್ಷದ ದಿನಾಂಕ ನಮೂದನೆಯಾಗಿ ಇಲಾಖೆಯಿಂದ ಭತ್ತದಬೀಜ ತಂದಾಗ ಇಲಾಖೆಯ ಬಿಲ್,ಕೃಷಿ ಯಂತ್ರಧಾರೆಯ ಮೂಲಕವಾಗಿ ಉಳುಮೆ ಮಾಡಿದಾಗ ಹಾಗೂ ನಾಟಿ ಮಾಡಿದಾಗ ರೈತರಿಗೆ ಕೃಷಿ ಯಂತ್ರಧಾರೆಯ ಮೂಲಕವಾಗಿ ಜಿಎಸ್‌ಟಿ ನಮೂದನೆಯಾಗಿರುವ ಟ್ಯಾಕ್ಸ್ ಇನ್ವಾಯ್ಸ್ ರೈತನ ಹೆಸರನ್ನು ನಮೂದಿಸಿ ನೀಡಲಾಗುವುದು,ಇದು ಬೆಳೆ ವಿಮೆ ಪಡೆಯುವ ಸಂದರ್ಭದಲ್ಲಿ ರೈತರಿಗೆ ಆಧಾರವಾಗುತ್ತದೆ(ಟ್ಯಾಕ್ಟರ್ ಮತ್ತು ನಾಟಿಯಂತ್ರದ ಬುಕ್ಕಿಂಗ್ ಮಾಡಲು ಕೃಷಿ ಯಂತ್ರಧಾರೆಯ ಪ್ರಬಂಧಕರಾದ ಸಚಿನ್ ರವರನ್ನು ಸಂಪರ್ಕಿಸಬಹುದು 9986623723))

ಇಂದು ಬೆಳ್ತಂಗಡಿಯಲ್ಲಿ ಮುಂಗಾರು ಮತ್ತು ಹಿಂಗಾರಿನಾ 500ಎಕ್ರೆ ಯಂತ್ರಶ್ರೀ ನಾಟಿಗೆ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ರವರು ಚಾಲನೆಯನ್ನು ನೀಡಿದ್ದು, ಹಡಿಲು ಭೂಮಿಯಲ್ಲಿ ಭತ್ತ ಕೃಷಿಯನ್ನು ಮಾಡುತ್ತಿರುವ ಡಾ| ಹರ್ಷ,
ಈ ಸಂದರ್ಭ ಮನೆಯ ಯಜಮಾನರಾದ ಫ್ರಾನ್ಸಿಸ್ ಮಿರಂದ, CHSC ಮ್ಯಾನೇಜರ್ ಸಚಿನ್, ನಾಟಿ ಡ್ರೈವರ್ ಜಗದೀಶ್, ಮೇಲ್ವಿಚಾರಕ ಸುಶಾಂತ್, ಕೃಷಿ ಅಧಿಕಾರಿ ರಾಮ್ ಕುಮಾರ್, ಹಾಗೂ ಭತ್ತ ಕೃಷಿಕರು ಉಪಸ್ಥಿತರಿದ್ದರು.

Related posts

ಮುಂಡಾಜೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ವೇಣೂರು ಸ. ಪ.ಪೂ. ಕಾಲೇಜಿಗೆ ಹಳೆವಿದ್ಯಾರ್ಥಿಗಳಿಂದ ಹೊಸ ಪ್ರೊಜೆಕ್ಟರ್ ಕೊಡುಗೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ವಿಷ್ಣುಪ್ರಕಾಶ್ ಅಧಿಕಾರ ಸ್ವೀಕಾರ

Suddi Udaya

ಹೊಸಂಗಡಿ ಧರಣೇಂದ್ರ ಕುಮಾರ್ ವಿರುದ್ದ ಊರ್ವ ಪೊಲೀಸ್ ಠಾಣೆಗೆ ದೂರು

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಮಾಸಿಕ ಸಭೆ ಮತ್ತು ಇಫ್ತಾರ್ ಸಮ್ಮಿಲನ

Suddi Udaya
error: Content is protected !!