ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಜೂ.13 ರಂದು ಯೋಗ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿ, ಉಜಿರೆಯ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ (ಎಸ್.ಡಿ.ಎಂ. ಸಿ.ಎನ್.ವೈ.ಎಸ್.)ದ ಪ್ರಾಧ್ಯಾಪಕಿ ಡಾ. ಸುಜಾತ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗದ ಆಯಾಮಗಳು, ಮಹತ್ವ, ದೇಹದ ಇರುವಿಕೆಗೆ ಕಾರಣವಾದ ಅಂಶಗಳನ್ನು ಉಪನಿಷತ್ ನ ಭೃಗು ಮಹರ್ಷಿಯ ಕಥೆ ಮೂಲಕ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್, ನಿತ್ಯ ಯೋಗಾಭ್ಯಾಸ ಮಾಡುವುದು ಬಹಳ ಮುಖ್ಯ ಎಂದರು.
ಎಸ್.ಡಿ.ಎಂ.ಸಿ.ಎನ್.ವೈ.ಎಸ್. ವಿದ್ಯಾರ್ಥಿಗಳಾದ ವರ್ಷ ಮತ್ತು ಸಂಹಿತ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿ ತಸ್ಮಯಿ ವಿಶ್ವ ಯೋಗ ದಿನದ ಕುರಿತು ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಸ್ವಾಗತಿಸಿ, ದೀಪಿಕ ಅತಿಥಿ ಪರಿಚಯ ನೀಡಿ, ಶೈಮ ವಂದಿಸಿದರು.