25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ : ಮಳೆಗೆ ತೀರ ಹದಗೆಟ್ಟ ಮುಳಿಕ್ಕಾರು ಮಣ್ಣಿನ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

ಧರ್ಮಸ್ಥಳ: ಇಲ್ಲಿಯ ಮುಳಿಕ್ಕಾರು ಎಂಬಲ್ಲಿ ಮಣ್ಣಿನ ರಸ್ತೆಯು ಮಳೆಗೆ ತೀರ ಹದೆಗೆಟ್ಟಿದ್ದು ಇಲ್ಲಿಯ ಗ್ರಾಮಸ್ಥರು ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ರೀತಿಯ ಸಲಕರಣೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಜನರು ನಡೆದುಕೊಂಡೇ ಹೋಗುವ ಮಟ್ಟಿಗೆ ಈ ರಸ್ತೆ ಹದಗೆಟ್ಟಿದೆ.
ಇಲ್ಲಿ ಅನೇಕ ಮನೆಗಳಿದ್ದು ಆಟೋ, ಜೀಪು ಚಾಲಕರು ನಮ್ಮ ವಾಹನ ಅಲ್ಲಿಗೆ ಬಾಡಿಗೆಗೆ ಹೋದರೆ ಎಲ್ಲಿ ಹೂತಾಕಿಕೊಂಡು ಬಿಡುತ್ತದೆ ಎಂಬ ಭಯ ಅವರಲ್ಲಿ ಕಾಣುತ್ತಿದೆ.


ಕಳೆದ ಚುನಾವಣೆಯಲ್ಲಿ ಮತಗಟ್ಟೆಗೆ ಬರುವುದಿಲ್ಲ ಎಂದು ಕುಳಿತ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರನ್ನು ಒಪ್ಪಿಸಿ ಈ ಬಾರಿ ಖಂಡಿತ ರಸ್ತೆ ಕಾಮಗಾರಿ ನಡೆಯುತ್ತದೆ ಎಂದು ಹೇಳಿ ಮತ ಹಾಕಿಸಿದ್ದರು.
ಇನ್ನಾದರೂ ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಮುಳಿಕ್ಕಾರು ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ವಿನಂತಿಸುತ್ತಿದ್ದಾರೆ.

Related posts

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಪ್ಲಾಸ್ಟಿಕ್ ನಿಷೇಧ ಬಗ್ಗೆ ವ್ಯಾಪಾರ ಕೇಂದ್ರಗಳ ಮೇಲೆ ಕಾರ್ಯಾಚರಣೆ

Suddi Udaya

ಗೇರುಕಟ್ಟೆಯಲ್ಲಿ ವಿಶ್ವ ಅಗ್ನಿಹೋತ್ರ ದಿನದ ಆಚರಣೆ

Suddi Udaya

ಮದರಂಗಿ ಶಾಸ್ತ್ರದ ನಡುವೆ ಮತಚಲಾಯಿಸಿದ ಮದುಮಗಳು: ಮಲವಂತಿಗೆ ಗ್ರಾಮದ ಮೋಹಿನಿಯವರು ಮತಚಲಾಯಿಸಿ ಎಲ್ಲರ ಗಮನ ಸೆಳೆದರು

Suddi Udaya

ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ ನಿಧನ

Suddi Udaya

ಡಿ.5: ವಿದ್ಯುತ್ ನಿಲುಗಡೆ

Suddi Udaya
error: Content is protected !!