April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘದ 28ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

ಬೆಳ್ತಂಗಡಿ: ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಬೆಳ್ತಂಗಡಿ, ಯುವಕ ಸಂಘ, ಹಾಗೂ ಮಹಿಳಾ ಸಂಘಗಳ ನೇತೃತ್ವದಲ್ಲಿ 28ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಇತ್ತೀಚೆಗೆ ಶ್ರೀ ಮಂಜುನಾಥೇಶ್ವರ ಸಭಾಭವನ ಸಂತೆಕಟ್ಟೆ ಬೆಳ್ತಂಗಡಿ ಇಲ್ಲಿ ನೆರವೇರಿತ್ತು.

ಈ ಸಂಧರ್ಭದಲ್ಲಿ ಮಲ್ಲವ ಸಾಮ್ರಾಜ್ಯದ ಗುರು ಪರಂಪರಾನುಗತ ಮಹಾಮಹತ್ತಿನ ಭುವನಗೀರಿ ಸಂಸ್ಥಾನ ಮಠಾಧ್ಯಾಕ್ಷರಾದ ಶಕ್ತಿವಿಶಿಷ್ಟಾದ್ವೈತ ವೇದಾಂತ ಆಚಾರ್ಯ ಕೆಳದಿ ಸಂಸ್ಥಾನ ರಾಜಗುರು ಶ್ರೀ .ಷ.ಬ್ರ. ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಕವಲೇ ದುರ್ಗ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ಇವರ ಶುಭ ಆರ್ಶಿವಾದದಿಂದ ಕಾರ್ಯಕ್ರಮ ನೇರವೇರಿತ್ತು.

ಸಮಾಜದ ಅಧ್ಯಕ್ಷ ಶಿವಶಂಕರ್ ಬೆಳ್ತಂಗಡಿ, ಕಾರ್ಯದರ್ಶಿ ಮೋನಪ್ಪ ಬೆಳ್ತಂಗಡಿ, ಕೋಶಾಧಿಕಾರಿ ಸತೀಶ್ ರಾಜ್ ಬೆಳ್ತಂಗಡಿ, ಯುವಕ ಸಂಘದ ಅಧ್ಯಕ್ಷ ಮೋಹನ್ ಬೆಳ್ತಂಗಡಿ, ಕಾರ್ಯದರ್ಶಿ ಈಶ್ವರ್ ಬೆಳ್ತಂಗಡಿ, ಕೋಶಾಧಿಕಾರಿ ಲೀಲಾಧರ ಕಿಲ್ಲೂರು, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜುಳ ಸತೀಶ್, ಕಾರ್ಯದರ್ಶಿ ಶ್ರೀಮತಿ ಆಶ್ವಿನಿ ದಿನೇಶ್, ಕೋಶಾಧಿಕಾರಿ ಶ್ರೀಮತಿ ಮಮತ ರವೀಂದ್ರ ಹಾಗೂ ಸಮಾಜ ಭಾಂಧವರು ಭಾಗವಹಿಸಿದರು.

ಈ ಸಂಧರ್ಭದಲ್ಲಿ ಮೋಹನ್ ಬೆಳ್ತಂಗಡಿ ಸಾರಥ್ಯದ ಸಪ್ತಸ್ವರಗಳ ಗಾನಯಾನ ಕಾರ್ಯಕ್ರಮ ಮತ್ತು ಸಮಾಜ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೇರವೇರಿತ್ತು.

Related posts

ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ನಾರಾವಿ ಮಹಾಶಕ್ತಿಕೇಂದ್ರದ ಸಭೆ

Suddi Udaya

ಪುಂಜಾಲಕಟ್ಟೆ ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪಣಾ ದಿನಾಚರಣೆ

Suddi Udaya

ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ: ಗಾಯ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕನ್ಯಾಡಿ ಸ್ವಾಮೀಜಿಗಳಿಗೆ ಗೌರವಾಭಿನಂದನೆ

Suddi Udaya

ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ರಸಪ್ರಶ್ನೆ ಕ್ವಿಜ್ ಸ್ಪರ್ಧೆ: ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿನಿ ಕು. ಮನ್ವಿ.ಕೆ. ಆರ್ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya
error: Content is protected !!