September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೋಕ್ಸೋ ಪ್ರಕರಣ: ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಹಾಗೂ ಮೋಹನ್ ರಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ತಾಲೂಕು ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಸಹಿತ ಇಬ್ಬರಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಳೆಂಜದಲ್ಲಿರುವ ತನ್ನ ಅಡಿಕೆ ಅಂಗಡಿ ಬಂದ್ ಮಾಡಿ ಮನೆಗೆ ಹೊರಡುವ ವೇಳೆ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ.ಅವರಿಗೆ ಕಾಂಗ್ರೆಸ್ ಮುಖಂಡ ಕುಶಾಲಪ್ಪ ಗೌಡ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಶ್ ಎಂ.ಕೆ.ಅವರ ಕೊಲೆ ಯತ್ನ ಪ್ರಯತ್ನ ನಡೆದ ಬೆನ್ನಿಗೇ ರಾಜೇಶ್ ಮತ್ತು ಅಭಿ ಯಾನೆ ಮೋಹನ್ ಎಂಬವರ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಬಂಧನ ಭೀತಿಯಲ್ಲಿದ್ದ ರಾಜೇಶ್ ಎಂ.ಕೆ. ಮತ್ತು ಅಭಿ ಯಾನೆ ಮೋಹನ್ ಅವರಿಗೆ ಜೂನ್ 14ರಂದು ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಖ್ಯಾತ ವಕೀಲ ಶಂಭು ಶರ್ಮ ವಾದಿಸಿದ್ದರು.

Related posts

ಕರಾಟೆ ಚಾಂಪಿಯನ್ ಶಿಪ್: ಶಕ್ತಿನಗರದ ಸೆನ್ಸಾಯ್ ಸಿರಾಜ್ ಎಚ್ ರವರಿಗೆ ಬ್ಲಾಕ್ ಬೆಲ್ಟ್ ಸೀನಿಯರ್ ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಟ್ರೋಫಿ

Suddi Udaya

ಧರ್ಮಸಂರಕ್ಷಣ ಯಾತ್ರೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಪ್ಲಾನ್” : : ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಈ ಸುದ್ದಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳ ಸ್ಪಷ್ಟನೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಜಲಮರುಪೂರಣ ಮಾಹಿತಿ ಮತ್ತು ಜಾಗೃತಿ: ದೇವಜಲ ನಮ್ಮೆಲ್ಲರ ಜೀವಜಲ; ವಂ.ಫಾ ವಾಲ್ಟರ್ ಡಿಮೆಲ್ಲೊ : ಬೋರ್ ವೆಲ್ ಜಲ ಮರುಪೂರಣದ ಮೂಲಕ 3 ತಿಂಗಳಿನಲ್ಲಿ ದಾಖಲೆಯ 28.6 ಲಕ್ಷ ಲೀಟರ್ ನೀರು ಭೂಗರ್ಭಕ್ಕೆ- ತಾಲೂಕಿನಲ್ಲಿಯೇ ಪ್ರಪ್ರಥಮ ಐತಿಹಾಸಿಕ ದಾಖಲೆ

Suddi Udaya

ಬೆಳ್ತಂಗಡಿ: ಭೀಕರ ರಸ್ತೆ ಅಪಘಾತ: ಹೇರಾಜೆ ಶೇಖರ ಬಂಗೇರ ಮೃತ್ಯು: ಸ್ಕೂಟಿ ಸವಾರೆ ಅನೂಷಾ ಗಂಭೀರ ಗಾಯ

Suddi Udaya

ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲ ಸೇವೆ ಕಾರ್ಯಕ್ರಮ , ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!