September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲ ಸೇವೆ ಕಾರ್ಯಕ್ರಮ , ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜನವರಿ 10 ಹಾಗೂ 11 ರಂದು ನಡೆಯುವ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ನಾಗತನುತರ್ಪಣ ಹಾಗೂ ನಾಗಬ್ರಹ್ಮಮಂಡಲ ಸೇವೆ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಡಿ 15 ರಂದು ದೇವಸ್ಥಾನದಲ್ಲಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳು ಮಡಂತ್ಯಾರು, ವಿದ್ಯೇಶ ಅಲೆವೂರಾಯ ಮಡಂತ್ಯಾರು, ರಂಗನಾಥ ನೂರಿತ್ತಾಯ ಕಡಂಬು, ಅನಂತಕೃಷ್ಣ ಇರ್ವತ್ರಾಯ ಮದ್ದಡ್ಕ, ಅನಂತ ಯಡಪಡಿತ್ತಾಯ ಕಳಾಯಿ, ಆದಿತ್ಯ ಬಾಗಲೋಡಿ, ಬೆಂಗಳೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಪ್ರಭಾಕರ ಆಚಾರ್ಯ, ಶೈಲೇಶ್ ಕುಮಾರ್ ಕುರ್ತೊಡಿ, ಚಂದ್ರರಾಜ್ ನೂಜೆಲು, ಗಣೇಶ್ ಭಂಡಾರಿ, ನಾಗೇಶ್ ಮೂಡಲ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಶಿಶಿಲ: ಕೋಳಿ ತ್ಯಾಜ್ಯ ಹಾಕುವ ವಿಚಾರದಲ್ಲಿ ದೂರು ನೀಡಿದ ಹಿನ್ನಲೆ: ಸ್ಥಳಕ್ಕೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಭೇಟಿ, ಪರಿಶೀಲನೆ

Suddi Udaya

ನೈತಿಕ ಪೊಲೀಸ್ ಗಿರಿ – ಐವರು ಪೊಲೀಸ್ ವಶಕ್ಕೆ : ಪ್ರತಿದೂರು ದಾಖಲು

Suddi Udaya

ವೇಣೂರು: ಪಡ್ಡಂದಡ್ಕ ನಿವಾಸಿ, ಹೋಟೆಲ್ ಉದ್ಯಮಿ ಹಂಝ ನಿಧನ

Suddi Udaya

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

Suddi Udaya

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಮಚ್ಚಿನ: ಎ.30-ಮೇ.03, ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya
error: Content is protected !!