ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆಯನ್ನು ಜೂ.15 ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ತಂದೆಯಂದಿರ ದಿನದ ಕವನ ರಚನೆ, ಚಿತ್ರ ರಚನೆ, ಕಲ್ಲಿನಲ್ಲಿ ಚಿತ್ರ ರಚನೆ, ಲೇಖನ ಬರಹ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ತಂದೆಯಂದಿರ ದಿನದ ಮಹತ್ವದ ಕುರಿತು ವಿದ್ಯಾರ್ಥಿನಿ ಸ್ನೇಹ ಭಾಷಣ ಮಾಡಿ, 9ನೇ ತರಗತಿ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಂದ ಗುಂಪು ಗಾಯನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ವಿದ್ಯಾರ್ಥಿಗಳಾದ ಶಶಾಂಕ್ ಮತ್ತು ಅದ್ವೈತ್ ಕಾರ್ಯಕ್ರಮ ನಿರೂಪಿಸಿದರು.