April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ : ಶ್ರೀ.ಧ.ಮಂ ಆಂ.ಮಾ. ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

ಉಜಿರೆ : ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆಯಲ್ಲಿ ಜೂನ್.15 ರಂದು ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ ನಡೆಯಿತು.

ಶಾಲಾ ವಿದ್ಯಾರ್ಥಿಗಳು ಶಾಲಾ ನಾಯಕನಾಗಿ ಪ್ರಾಂಜಲ್ ಡಿ ಶೆಟ್ಟಿ ಹಾಗೂ ಶಾಲಾ ಉಪ ನಾಯಕನಾಗಿ ಸಿಯೋನ್ ರಾಜ್ ಇವರನ್ನು ಆಯ್ಕೆ ಮಾಡಿರುತ್ತಾರೆ.
ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ಕುನಾರ್, ನೀರಾವರಿ ಮಂತ್ರಿ ಮಾನ್ಯ, ಸಾಂಸ್ಕೃತಿಕ ಮಂತ್ರಿ ಶ್ರೀಮ, ಆರೋಗ್ಯ ಮಂತ್ರಿ ಚಂಪಾ, ಕ್ರೀಡಾ ಮಂತ್ರಿ ರೊಹಾನಿ, ಶಿಸ್ತು ಮಂತ್ರಿಯಾಗಿ ಸನ್ವಿತ್ ಇವರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿರುತ್ತಾರೆ ಹಾಗೂ ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನು ಶಿಕ್ಷಕ ವೃಂದದವರು ಅಭಿನಂದಿಸಿದರು.

ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಸಂಸತ್ತು ಸಂಯೋಜಕರಾದ ಸವಿತಾ ಮತ್ತು ಗಣೇಶ್ ಚುನಾವಣೆಯ ಜವಾಬ್ದಾರಿ ವಹಿಸಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ “ಶಿಕ್ಷಾ ಸಪ್ತಾಹ” ಕಾರ್ಯಕ್ರಮ

Suddi Udaya

ಕಳಿಯ ಪರಪ್ಪುನಲ್ಲಿ ಮೀನು ಮಾರುಕಟ್ಟೆ ಉದ್ಘಾಟನೆ

Suddi Udaya

ಸೆ.6: ಗರ್ಡಾಡಿ ಯುವಕ ಮಂಡಲದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ರಸ್ತೆ – ಕುಡಿಯುವ ನೀರಿನ ಬೇಡಿಕೆಯನ್ನು ಮುಂದಿಟ್ಟು ಚಾರ್ಮಾಡಿಯ ಮಸಣಗುಡ್ಡೆ ಪರಿಸರದ ಜನರು ಚುನಾವಣೆ ಬಹಿಷ್ಕರಿಸಲು ನಿಧಾ೯ರ

Suddi Udaya

ಆರಂಬೋಡಿ: ಕುಂಟಾಲ ಪಲ್ಕೆ ಯುವತಿ ನಾಪತ್ತೆ

Suddi Udaya
error: Content is protected !!