23.3 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ . ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ಪುಸ್ತಕ ವಿತರಣೆ

ನಡ : ಮಣ್ಣಿನ ಹರಕೆಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ . ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ಜೂ. 15 ನೇ ಶನಿವಾರ ಕ್ಷೇತ್ರದಲ್ಲಿ ಸ. ಉ. ಪ್ರಾ. ಶಾಲೆ ಕನ್ಯಾಡಿಯ 1 ರಿಂದ 8 ನೇ ತರಗತಿವರೆಗಿನ ಒಟ್ಟು 70 ಮಕ್ಕಳು ಹಾಗೂ ಸ. ಕಿ ಪ್ರಾ. ಶಾಲೆ ಸುರ್ಯದ 1 ರಿಂದ 5 ನೇ ತರಗತಿವರೆಗಿನ 32 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ಇವರು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸಂದೀಪಾ ಸತೀಶ್ಚಂದ್ರ, ಸಂಗ್ರಾಮ್. ಎಸ್, ಶ್ರೀಮತಿ ಕೃತಿ ಸಂಗ್ರಾಮ್, ಧನಂಜಯ ಅಜ್ರಿ ನಡಗುತ್ತು, ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಡಾ. ಪ್ರದೀಪ್ ನಾವೂರು, ವಕೀಲರಾದ ಶಶಿಕಿರಣ್ ಜೈನ್, ಸುರ್ಯಗುತ್ತು ಕುಟುಂಬಸ್ಥರು, ಅಧ್ಯಾಪಕರಾದ ಶ್ರೀಮತಿ ಜಯಾ, ಶ್ರೀಮತಿ ಶೋಭಾ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ನೊಣಯ್ಯ ಗೌಡ, ಶ್ರೀಮತಿ ಪದ್ಮಾವತಿ ಸುಕೇಶ್ ಪೂಜಾರಿ, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಅಧ್ಯಾಪಕರಾದ ವಿಕಾಸ್ ಇವರು ಕೃತ ಜ್ಞತೆಗಳನ್ನು ಸಲ್ಲಿಸಿದರು.

Related posts

ಜೆಸಿಐ ಕೊಕ್ಕಡ ಕಪಿಲಾ ಸದಸ್ಯರಿಗೆ ಎಲ್.ಎ.ವಿ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪ್ರವಾಸಿ ಮಂದಿರ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಲೋಕೋಪಯೋಗಿ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನೂತನ ಪ್ರಾಂಶುಪಾಲರಾಗಿ ಪ್ರೊಫೆಸರ್ ಸುರೇಶ್

Suddi Udaya

ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನ ಉದ್ಘಾಟನೆ

Suddi Udaya

ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೈಬರ್ ಅಪರಾಧ ಮತ್ತು ಸುರಕ್ಷತೆ

Suddi Udaya

ಪೆರಿಯಡ್ಕ ಬೆಳಾಲು ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya
error: Content is protected !!