ಬೆಳ್ತಂಗಡಿ: ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್ ಡೀಸಿಲ್ ದರ ಏರಿಸಿದ ರಾಜ್ಯದ ಕಾಂಗ್ರೇಸ್ ಸರಕಾರದ ನಡೆ ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಟಿಕಿಸಿದ್ದಾರೆ.
ಮೊದಲೇ ಕೇಂದ್ರದ ಬಿಜೆಪಿ ಸರಕಾರದ ಬೆಲೆ ಏರಿಕೆಯ ದೋರಣೆಯಿಂದ ಬದುಕು ಸಾಗಿಸಲು ಕಷ್ಟ ಪಡುತ್ತಿರುವ ಜನರ ಮೇಲೆ ಮತ್ತಷ್ಟು ಬೆಲೆ ಏರಿಕೆಯ ಹೊರೆಯನ್ನು ಹೊರಿಸಿದ ರಾಜ್ಯ ಕಾಂಗ್ರೇಸ್ ಸರಕಾರಕ್ಕೆ ದಿಕ್ಕಾರ ಎಂದು ಹೇಳಿದ ಅವರು ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲದೆ ಸರ್ವಾದಿಕಾರಿಯಾಗಿ ಆಡಳಿತ ನಡೆಸುತ್ತಿದ್ದ, ವಿಪರೀತ ಬೆಲೆ ಏರಿಸಿ ಜನರ ರಕ್ತ ಹಿಂಡುತ್ತಿದ್ದ ಬಿಜೆಪಿಯ ಮಣ್ಣು ಮುಕ್ಕಿಸಿದ ಜನರು ನಾಳೆ ಕಾಂಗ್ರೇಸ್‌ಗೂ ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದರು.
ಈ ಬಂಡವಾಳಶಾಹಿ ಪರವಾದ ಬಿಜೆಪಿ ಕಾಂಗ್ರೇಸ್ ಪಕ್ಷಗಳಿಗೆ ಜನರ ಮತ ಬೇಕು ಆದರೆ ಅವರ ಬದುಕು ಬೇಡ ಎಂಬ ರೀತಿ ಗೆದ್ದ ಮೇಲೆ ಆಡಳಿತ ನಡೆಸುವ ಈ ಪಕ್ಷಗಳ ಆಡಳಿತದ ವಿರುದ್ದ ಸಮರದೀರ ಹೋರಾಟ ನಡೆಸಲು ಸಿಪಿಐಎಂ ಮುಂದಾಗುತ್ತದೆ ಎಂದರು. ಜನರ ಮೇಲೆ ನಿಜವಾದ ಕಾಳಜಿ ಇದ್ದದ್ದೇ ಆದರೆ , ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಪೆಟ್ರೋಲ್, ಡಿಸಿಲ್ ಮೇಲೆ ಹಾಕಿದ ಮಾರಾಟ ತೆರಿಗೆಯನ್ನು ರಾಜ್ಯ ಸರಕಾರ ತಕ್ಷಣ ಹಿಂಪಡೆಯಬೇಕು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸುತ್ತದೆ ಎಂದರು.