April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದ್ ಆಚರಣೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಈದ್ ಸಂಭ್ರಮ
ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮುಸ್ಲಿಮರ ಪ್ರಮುಖ ಹಬ್ಬ ಈದುಲ್ ಅಲ್‌ಹಾ (ಬಕ್ರೀದ್) ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಪುರುಷರು ಮತ್ತು ಮಕ್ಕಳು ಬೆಳಗ್ಗೆಯೇ ಮಸ್ಜಿದ್ ಗಳಿಗೆ ತೆರಳಿ ಬಕ್ರೀದ್ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ಬಲಿ ಪೆರುನಾಳ್ ಪ್ರಾರ್ಥನೆಯ ಬಳಿಕ ಪರಸ್ಪರ ಸ್ನೇಹದ ಸಂಕೇತವಾಗಿ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಮಹಿಳೆಯರೂ ಕೂಡ ವಿಶೇಷ ತಿಂಡಿ ತಿನಿಸು, ಖಾದ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರ ಜೊತೆ ಸಹಭೋಜನ ಮಾಡುವ ಮೂಲಕ ಮನೆಯಲ್ಲೇ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.


ಕಾಜೂರಿನಲ್ಲಿ ವಿಶೇಷ ಪ್ರಾರ್ಥನೆ;
ನಾಡಿನ ಸರ್ವಧರ್ಮೀಯರ ಸೌಹಾರ್ದ ಕೇಂದ್ರವಾದ ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ‌ ಕೇಂದ್ರ ಕಾಜೂರು ಮಸ್ಜಿದ್ ನಲ್ಲಿ ಈದುಲ್ ಅಲ್‌ಹಾ (ಬಕ್ರೀದ್) ಹಬ್ಬದ ಪ್ರಾರ್ಥನೆಗೆ ಕಾಜೂರು ತಂಙಳ್ ನೇತೃತ್ವ ನೀಡಿದರು. ಹಬ್ಬದ ಪ್ರಾರ್ಥನೆ ಬಳಿಕ ಇಲ್ಲಿ ಅಂತ್ಯ‌ವಿಶ್ರಾಂತಿ ಹೊಂದುತ್ತಿರುವ ಔಲಿಯಾಗಳ ಸನ್ನಿದಾನದಲ್ಲಿ ವಿಶ್ವ ಶಾಂತಿಗಾಗಿ ದುಆ ನೆರವೇರಿಸಲಾಯಿತು.
ಈದ್ ಸಂಭ್ರಮದಲ್ಲಿ ಬೆಳ್ತಂಗಡಿ ತಾಲೂಕು ಪೊಲೀಸ್ ಸುಬ್ಬಾಪೂರ್ ಮಠ್ ಸಹಿತ ಸಿಬ್ಬಂದಿಗಳು ಭಾಗವಹಿಸಿದ್ದರು.

Related posts

ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಶಿಶಿಲ ಕಪಿಲ ನದಿಯಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು

Suddi Udaya

ನಿಡ್ಲೆ :ಅಸ್ತಿ ಮಜ್ಜೆ ಶಸ್ತ್ರಚಿಕಿತ್ಸೆ ನೆರವು

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya
error: Content is protected !!