ಉಜಿರೆ : ಉಜಿರೆಯ ಎಸ್.ಡಿ.ಎಮ್ ಡಿ.ಎಡ್ ಕಾಲೇಜಿನ ಸಭಾಂಗಣದಲ್ಲಿ ಎಸ್.ಡಿ.ಎಮ್ ಶಾಲಾ ವಿದ್ಯಾರ್ಥಿಗಳಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ‘ಮ್ಯೂಸಿಯಂ ಆನ್ ವೀಲ್’ ಜೊತೆಗೆ ‘ಒರಿಗಾಮಿ’ ಕಾರ್ಯಗಾರ ಜೂ17ರಂದು ನಡೆಯಿತು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಶುಭನುಡಿಗಳನ್ನಾಡಿದರು.
‘ಮ್ಯೂಸಿಯಂ ಆನ್ ವೀಲ್’ ನ ಸಹಾಯಕ ಶಿಕ್ಷಣ ಸಹಾಯಕರಾದ ಋತುಜ ಹಾಗೂ ಕಶ್ಯಪಿ ಕಾರ್ಯಗಾರದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಶಾಲಾ ವಿದ್ಯಾರ್ಥಿಗಳಿಗೆ ಬಣ್ಣ ಕಾಗದಗಳಿಂದ ಒರಿಗಾಮಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ, ಮ್ಯೂಸಿಯಂ ಆನ್ ವೀಲ್ ನ ಶಿಕ್ಷಣ ಸಹಾಯಕರಾದ ಚಿನ್ಮಯಿ, ಸಹಾಯಕ ಶಿಕ್ಷಣ ಸಹಾಯಕರಾದ ಕಶ್ಯಪಿ, ಋತುಜ ಹಾಗೂ ಚಟುವಟಿಕೆ ಸಹಾಯಕರಾದ ದೇವೇಶ್ ಮತ್ತು ಅಮಿತ್, ಮ್ಯೂಸಿಯಂ ಬಸ್ ಚಾಲಕ ಶಿವಾಜಿ ತಾವರೆ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕಿಯರಾದ ಕಲ್ಯಾಣಿ ನಿರೂಪಿಸಿ, ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ ಜಿ ಸ್ವಾಗತಿಸಿ, ಶಿಕ್ಷಕ ಜಾರ್ಜ್ ವಂದಿಸಿದರು.