ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ರವರ ಆರೋಗ್ಯ ವಿಚಾರಿಸಿದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್

Suddi Udaya

ಬೆಳ್ತಂಗಡಿ:ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ರಾಜ್ಯ ಸಂಘಟನಾಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿರುವ ಚಂದು ಎಲ್ ರವರು ಅನಾರೋಗ್ಯ ನಿಮಿತ್ತ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರ ತಿಳಿದ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ಇದರ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ರವರು ಮತ್ತು ದಸಂಸ ರಾಜ್ಯ ನಾಯಕರು ಮಂಗಳೂರು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಚಂದು ಎಲ್ ರವರ ಆರೋಗ್ಯ ವಿಚಾರಿಸಿ ಅಲ್ಲಿನ ವೈದ್ಯರಲ್ಲಿ ಚಿಕಿತ್ಸಾ ವಿಧಾನದ ಬಗ್ಗೆ ವಿವರ ಪಡೆದು ಹೆಚ್ಚಿನ ಚಿಕಿತ್ಸೆ ಒದಗಿಸುವಂತೆ ವೈದ್ಯರ ಬಳಿ ವಿನಂತಿ ಮಾಡಿದರು.

ಬಳಿಕ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿನ್ನಿಕಲ್ಲು ಚಂದು ಎಲ್ ರವರ ಮನೆಗೆ ಭೇಟಿ ನೀಡಿ ಅವರ ಪತ್ನಿ ಮಕ್ಕಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ರಾಜ್ಯದ ಸಂಘಟನೆ ನಿಮ್ಮ ಜೊತೆಗೆ ಇದೆ ಎಂದು ಹೇಳಿ ಅವರಿಗೆ ಅರ್ಥಿಕ ಸಹಾಯ ನೀಡಿ ಧೈರ್ಯ ತುಂಬಿದರು.

ರಾಜ್ಯ ಸಮಿತಿಯ ತಂಡದ ಜೊತೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮಲ್ಲೇಶ್ ಅಂಬುಗ , ಮೈಸೂರು ವಿಭಾಗ ಸಂಚಾಲಕ ಸಿದ್ದರಾಜು ದೊಂಡಿಂದವಾಡಿ , ಮೈಸೂರು ವಿಭಾಗ ಸಂಘಟನಾ ಸಂಚಾಲಕ ಶಿವು ಗೊಬ್ಬರ್ಗಾಲ್ , ಉಡುಪಿ ಜಿಲ್ಲಾ ಸಂಚಾಲಕ ಸುಂದರ ಮಾಸ್ಟರ್ , ವಿಧ್ಯಾರ್ಥಿ ಸಂಚಾಲಕ ಎಸ್. ಎಸ್ ಪ್ರಸಾದ್ , ಉಡುಪಿ ಪಿಡ್ಲೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪರಮೇಶ್ವರ ಉಪ್ಪೂರು , ಉಡುಪಿ ತಾಲೂಕು ಸಂ.ಸಂಚಾಲಕ ಕಮಲಾಕ್ಷ ಕರ್ಕೇರ , ದ.ಕ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ , ಮಂಗಳೂರು ತಾಲೂಕು ಸಂಚಾಲಕ ಸುನೀಲ್ ಆದ್ಯಪಾಡಿ , ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ , ತಾಲೂಕು ಸಂಚಾಲಕ ರಮೇಶ್ ಆರ್ , ಮಾಜಿ ತಾಲೂಕು ಸಂಚಾಲಕ , ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್ ಬೇಬಿ ಸುವರ್ಣ , ಜಿಲ್ಲಾ ಸಂಘಟನಾ ಸಂಚಾಲಕ ವೆಂಕಣ್ಣ ಕೊಯ್ಯೂರು , ಜಯಾನಂದ ಕೊಯ್ಯೂರು , ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಕುಮಾರ್ ಲಾಯಿಲ , ನಾಗರಾಜ್ ಎಸ್ ಲಾಯಿಲ , ಸುಂದರ ನಾಲ್ಕೂರು , ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಶಾಂತಿಕೋಡಿ , ಬೈರ ಸಮಾಜ ಸೇವಾ ಸಂಘದ ಶ್ರೀನಿವಾಸ್ ಲಾಯಿಲ , ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಉಪಸ್ಥಿತರಿದ್ದರು.

Leave a Comment

error: Content is protected !!