24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೂ. 22 ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ವಿದುಷಿ ಕು| ಚೈತ್ರ ಭಟ್ ಭರತನಾಟ್ಯ ರಂಗಪ್ರವೇಶ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮಲ್ಲರಮಾಡಿ ನಿವಾಸಿ ನೃತ್ಯಪಟು ವಿದುಷಿ ಕುಮಾರಿ ಚೈತ್ರ ಭಟ್ ಇವರ ಭರತನಾಟ್ಯ ರಂಗಪ್ರವೇಶ ಸಮಾರಂಭ ಮಂಗಳೂರಿನ ನೃತ್ಯಭಾರತಿ ಸಹಯೋಗದಲ್ಲಿ  ಜೂ. 22 ರಂದು ಶನಿವಾರ ಸಂಜೆ ಗಂಟೆ 6.15 ರಿಂದ  ಧರ್ಮಸ್ಥಳದಲ್ಲಿ ಅಮೃತವರ್ಷಿಣಿ  ಸಭಾಭವನದಲ್ಲಿ ನಡೆಯಲಿದೆ.


ಕುಮಾರಿ ಚೈತ್ರ ಭಟ್ ಅವರ ಗುರು ಗೀತಾ ಸರಳಾಯರ ನೃತ್ಯನಿರ್ದೇಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ವಿದುಷಿ ರಶ್ಮಿ ಚಿದಾನಂದ (ನಟುವಾಂಗ), ಸ್ವರಾಗ್, ಮಾಹೆ (ಹಾಡುಗಾರಿಕೆ), ಉಡುಪಿಯ ವಿದ್ವಾನ್ ಬಾಲಚಂದ್ರಭಾಗವತ್ (ಮೃದಂಗ) ಬೆಂಗಳೂರಿನ ದೂರದರ್ಶನ ಕಲಾವಿದ ವಿದ್ವಾನ್ ಗಣೇಶ್ ಕೆ.ಎಸ್. (ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು.

ಸಭಾ ಕಾರ್ಯಕ್ರಮ: ಶನಿವಾರ ರಾತ್ರಿ ಗಂಟೆ 7.30 ರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉಳ್ಳಾಲ ಮೋಹನ್ ಕುಮಾರ್ ಮತ್ತು ಸುರತ್ಕಲ್ ಸುಧಾಕರ ರಾವ್ ಪೇಜಾವರ ಶುಭಾಶಂಸನೆ ಮಾಡುವರು.


Related posts

ನಾವರ: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಶ್ರೀ ಧ.ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ವ್ಯಾಪಾರ ಮೇಳ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಅಭಿಯಾನ

Suddi Udaya

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya
error: Content is protected !!