24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಕೊಯ್ಯೂರು : ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಆನಂದ ಡಿ. ಯವರು, ದೀಪ ಪ್ರಜ್ವಲನದೊoದಿಗೆ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ತಮ್ಮ ಬದ್ಧತೆಯ ಬಗ್ಗೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮೋಹನ ಗೌಡ ವಹಿಸಿಕೊಂಡಿದ್ದರು.

ಕಾರ್ಯಕ್ರಮ ಸಂಘಟಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.


ವಿದ್ಯಾರ್ಥಿಗಳಾದ ಭವ್ಯ, ಪ್ರಜ್ಞಾ, ನಿಶ್ಮಿತಾ ಪ್ರಾರ್ಥನೆ ಗೈದರು. ಕುಮಾರಿ ಭವ್ಯ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಕೃತಿಕ್ ವಂದಿಸಿದರು. ಕು| ರಂಝಿನ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಮತಿ ಭವ್ಯ, ಲಕ್ಷ್ಮಣ ಗೌಡ, ಶ್ರೀಮತಿ ಪ್ರೀತಿ, ಸಂತೋಷ್ ಸಹಕರಿಸಿದರು.

Related posts

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ

Suddi Udaya

ಮುಂಡೂರು: ಮಳೆಗೆ ಮನೆ ಬಳಿ ಮಣ್ಣು ಕುಸಿತ, ಅಪಾಯದಂಚಿನಲ್ಲಿ ಮನೆ

Suddi Udaya

ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೈನಿಕ ಕುಕ್ಕೇಡಿಯ ಚಂದ್ರಹಾಸ ಪೂಜಾರಿ ನಿಧನ: ತಿಂಗಳ ಅಂತರದಲ್ಲಿ ‌ ಪತಿ -ಪತ್ನಿ ಸಾವು

Suddi Udaya

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

Suddi Udaya

ಕಿಶೋರ್ ಕುಮಾರ್ ಬೊಟ್ಯಾಡಿ ನಿರ್ಮಾಣದಲ್ಲಿ ಮೂಡಿ ಬಂದಿರುವ “ELLA” ಚಲನಚಿತ್ರ ಬಿಡುಗಡೆ

Suddi Udaya

ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟ: ಎಸ್.ಡಿ.ಎಂ ಕಾಲೇಜಿನ ಪುರುಷರ ತಂಡ ಪ್ರಥಮ ಹಾಗೂ ಮಹಿಳೆಯರ ತಂಡ ದ್ವಿತೀಯ

Suddi Udaya
error: Content is protected !!