April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯಲ್ಲಿ ಪ್ರಶ್ವಿನ್ ಪ್ರಿಂಟರ್ಸ್ ಶುಭಾರಂಭ

ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜು ರಸ್ತೆ ಪಕ್ಕದ ಶ್ರೀ ಮಂಜುನಾಥ ಕೃಪ ಕಟ್ಟಡದಲ್ಲಿ ನೂತನವಾಗಿ ಪ್ರಶ್ವಿನ್ ಪ್ರಿಂಟರ್ಸ್ ಜೂ.19 ರಂದು ಶುಭಾರಂಭಗೊಂಡಿದೆ.


ನಡ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಿರಣ್ ಎಮ್. ಕಚೇರಿಯನ್ನು ಉದ್ಘಾಟಿಸಿದರು.
ನ.ಪಂ. ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ ಪಿ. ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಸಣ್ಣ ವಯಸ್ಸಿನಲ್ಲಿ ಸುನೀಲ್ ಕುಮಾರ್ ಕೆ. ಪ್ರಶ್ವಿನ್ ಪ್ರಿಂಟರ್ಸ್ ಸಂಸ್ಥೆಯನ್ನು ತೆರೆಯುವ ಮೂಲಕ ಜನರಲ್ಲಿ ವಿಶ್ವಾಸಾರ್ಹ ವ್ಯಕ್ತಿಯಾಗಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಬ್ಯಾಂಕ್ ಸ್ಥಾಪಕರಾದ ಲ| ವಿ.ಆರ್.ನಾಯಕ್, ವಾಣಿ ಶಿಕ್ಷಣ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಿ ನಾರಾಯಣ, ಬೆಳ್ತಂಗಡಿ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ರಾವ್, ದಿನು ಪ್ಯಾಶನ್ ಮಾಲೀಕರಾದ ದಿನೇಶ್, ನಿವೃತ್ತ ಸೈನಿಕ ದಿನೇಶ್ ಗೌಡ ಕೆ, ಕಳಿಯ ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಕೆ. ಕಳಿಯ ಸಿ.ಎ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ರಾಜೀವ ಗೌಡ ಕೆ., ರಕ್ತೇಶ್ವರಿಪದವು ಭಜನಾ ಮಂಡಳಿ ಅಧ್ಯಕ್ಷ ವಸಂತ ಗೌಡ ಕೆ. ದಂಪತಿಗಳು, ಸಂಸ್ಥೆಯ ಮಾಲೀಕರ ತಾಯಿ ಶ್ರೀಮತಿ ಸೇಸಮ್ಮ ಹಾಗೂ ಕುಟುಂಬಸ್ಥರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು ಶುಭ ಹಾರೈಸಿದರು.


ಸಂಸ್ಥೆಯಲ್ಲಿ ಜೆರಾಕ್ಸ್, ಆನ್ಲೈನ್, ಸರಕಾರಿ ಇಲಾಖೆ ಸಂಬಂಧಿಸಿದ ಎಲ್ಲಾ ಅರ್ಜಿ ಫಾರಂಗಳು ಕ್ಲಪ್ತ ಸಮಯದಲ್ಲಿ ಮಿತದರದಲ್ಲಿ ದೊರೆಯುತ್ತದೆ. ಗ್ರಾಹಕರು ಸಹಕರಿಸಿಬೇಕೆಂದು ಸಂಸ್ಥೆಯ ಪಾಲುದಾರರಾದ ಸುನೀಲ್ ಕುಮಾರ್ ಕೆ. ಹಾಗೂ ಸಹೋದರಿ ಪಾವನ ಪ್ರವೀಣ್ ಗೌಡ ಹೇಳಿದರು.


ಕಳಿಯ ಸಿ.ಎ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಕೆ. ಸ್ವಾಗತಿಸಿ, ವಂದಿಸಿದರು.

Related posts

ಕಳೆಂಜ: ನಂದಗೋಕುಲ ದೀಪೋತ್ಸವ ಕಾರ್ಯಕ್ರಮ ಮುಂದೂಡಿಕೆ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಆ.2 : ವೇಣೂರು ವಿದ್ಯುತ್ ನಿಲುಗಡೆ

Suddi Udaya

ಭಾರೀ ಮಳೆಗೆ ತೆಕ್ಕಾರು ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯ ಕಾಂಪೌಂಡ್ ಕುಸಿತ

Suddi Udaya

ಚಿಬಿದ್ರೆ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರಂಟು ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!