ಉಜಿರೆ : ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೇ 30ರಂದು ನಾಪತ್ತೆಯಾಗಿದ್ದು ಜೂ.18 ರಂದು ಹೈದರಾಬಾದ್ ನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ವಿವರ ಉಜಿರೆಯಲ್ಲಿ ವಾಸ್ತವ್ಯದಲ್ಲಿರುವ ವಿದ್ಯಾರ್ಥಿ ದಿವ್ಯಾ ಎಸ್ , ದೇವಾಂಗ ರಸ್ತೆ, ಕಸಬಾ ಹೋಬಳಿ, ಬೇಲೂರು ಕಸಬಾ, ಬೇಲೂರು ತಾಲೂಕು, ಹಾಸನ ಜಿಲ್ಲೆ ಎಂಬವರು ಶ್ರೀ ಧರ್ಮಸ್ಥಳ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಮೇ 29 ರಂದು ಬೆಳೆಗ್ಗೆ 8 ಗಂಟೆ ಸಮಯಕ್ಕೆ ಕ್ರೀಡಾಂಗಣಕ್ಕೆ ಹೋಗಿ ಬರುತ್ತೇನೆ ಎಂದು ನಿಲಯ ಪಾಲಕಿಯಲ್ಲಿ ಅನುಮತಿ ಪಡೆದುಕೊಂಡು ಹೋದವಳು, ಹಾಸ್ಟೇಲ್ ಗೂ ವಾಪಸ್ಸು ಬರದೇ, ಕಾಲೇಜಿಗೂ ಹೋಗದೇ, ಮನೆಗೂ ಹೋಗದೇ ನಾಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ಕಾಣೆಯಾದ ದೂರು ದಾಖಲಾದ ಕೂಡಲೆ ಕಾರ್ಯಪ್ರವೃತರಾದ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುಬ್ಬಾಪೂರ್ ಮಠ್ ಅವರ ನೇತೃತ್ವದ ಸಿಬ್ಬಂದಿ ಚರಣ್ ರಾಜ್ ಮತ್ತು ಬಸವರಾಜ್ ಅವರು ವಿದ್ಯಾರ್ಥಿನಿ ಹೈದರಾಬಾದ್‌ನ, ನಿಜಮಾಬಾದ್ ನ ಸಂಬಂಧಿಕರ ಮನೆಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಜೂ.18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ. ದೂರದ ಕಾಲೇಜಿಗೆ ಮನೆಯವರು ಸೇರಿಸಿದ್ದರಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೆ ಯಾರಿಗೂ ತಿಳಿಸದೆ ಹೈದರಾಬಾದ್‌ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಪೊಲೀಸರಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.