ಉಜಿರೆ : ಕಲಿಕೆ ಮೂಲಕ ಸಂಸ್ಕಾರ ವೃದ್ಧಿಗೊಂಡರೆ ಭವಿಷ್ಯ ಉತ್ತಮಗೊಳ್ಳುವುದು. ಸಮಾಜದ ಏಳಿಗೆಗೆ ಉತ್ತಮ ಯುವ ಪೀಳಿಗೆಯ ಅನಿವಾರ್ಯತೆ ಇದ್ದು, ಮೌಲ್ಯಯುತ ವಿದ್ಯೆ ,ಉತ್ತಮ ಗುಣನಡತೆಯೂ, ವಿನಯಶೀಲತೆಯೂ ಅತೀ ಮುಖ್ಯ. ಗುರುಕುಲ ಮಾದರಿ ಶಿಕ್ಷಣ ಎಲ್ಲಾದರೂ ಸ್ವಲ್ಪ ಮಟ್ಟಿಗೆ ಉಳಿದಿದೆ ಎಂದಾದರೆ ಅದು ಈ ಸಂಸ್ಥೆ ಮೂಲಕವೆಂದು, ಶ್ರೀ.ಧ.ಮಂ ವಸತಿ ಪ.ಪೂ. ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಟ ಉದಾಹರಣೆಗಳ ಮೂಲಕ ಎರಡು ದಿನಗಳ ಕಾರ್ಯಗಾರವನ್ನು ಎಸ್.ಡಿ.ಎಂ.ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಕೆ.ಎಸ್.ಉಪಸ್ಥಿತರಿದ್ದರು.
ಗಣಕಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ವಂದಿಸಿ, ನಿರೂಪಿಸಿದರು.