24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ: ಸಂತ ಅಂತೋನಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜು ನಾರಾವಿ ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಜೂ. 15 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.


ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ. ಆಲ್ವಿನ್ ಸೆರಾವೋ ” ನಾಯಕತ್ವ ಎಂದರೆ ಜವಾಬ್ದಾರಿ, ಎಲ್ಲರೊಂದಿಗೆ ಸೇರಿ ಜವಾಬ್ಧಾರಿಯನ್ನು ನಿರ್ವಹಿಸುವುದು ಸವಾಲಿನ ಕೆಲಸ. ನಾಯಕನಾದವನಿಗೆ ನಾಯಕತ್ವದ ಅರಿವಿರಬೇಕು ಎಂದರು.

ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ರಿಚರ್ಡ್ ಮೋರಸ್, ವಿದ್ಯಾರ್ಥಿ ಸಂಘದ ಸಂಯೋಜಕಿ ಶ್ರೀಮತಿ ಜ್ಯೋತಿ ಹೆಗ್ಡೆ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ನಾಯಕನಾಗಿ ಆಯ್ಕೆಯಾದ ಕು.ಜಿತೇಶ್, ಉಪನಾಯಕಿ ಅಶ್ಮಿ ಸಜಿ, ಕಾರ್ಯದರ್ಶಿ ರಿಯಾನ ಡಿ’ಸೋಜ ಹಾಗೂ ವಿವಿಧ ಸಂಘದ ಪದಾಧಿಕಾರಿಗಳಿಗೆ ಪ್ರಾಂಶುಪಾಲರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶ್ರೀಮತಿ ಜ್ಯೋತಿ ಹೆಗ್ಡೆ ಸ್ವಾಗತಿಸಿ, ಸಂತೋಷ್ ಸಲ್ಡಾನ ವಂದಿಸಿದರು ಹಾಗೂ ಹಿಂದಿ ಭಾಷಾ ಉಪನ್ಯಾಸಕಿ ಶ್ರೀಮತಿ ಛಾಯಾ ತುಳುಪುಳೆ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಕನ್ನಡ ಸೇನೆ -ಕರ್ನಾಟಕ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಕಳೆಂಜ ಗ್ರಾಮದ ಕರ್ಮಾಜೆಯಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯ ಶ್ರೀಧರ ಪೂಜಾರಿ ನಿಧನ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ಪೆರ್ಲ-ಬೈಪಾಡಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya

ಕೊಕ್ಕಡ ನಿವಾಸಿ ರೇಖಾ ವಿಷ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!