30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‌ಲೈನ್ ಮೂಲಕ ಬುಕಿಂಗ್

ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಹೆಚ್ಚಿನ ಚಾರಣಿಗರ ಒತ್ತಡ ಇರುವುದರಿಂದ, ಗರಿಷ್ಠ 300 ಜನರಿಗೆ ಅವಕಾಶ ನೀಡಲಾಗುತ್ತದೆ.

ಚಾರಣಕ್ಕೆ (www.kudremukhanationalpark.in) ಮುಖಾಂತರ ಬುಕಿಂಗ್ ಮಾಡಬೇಕು, ಒಬ್ಬರು ಗರಿಷ್ಠ ಮೂರು ಜನರಿಗೆ ಬುಕಿಂಗ್ ಮಾಡಬಹುದು. ಎಲ್ಲ ಚಾರಣಿಗರು ಆನ್‌ಲೈನ್ ಮೂಲಕ ಮಾತ್ರ ಬುಕಿಂಗ್ ಮಾಡಬೇಕು. ಆಫ್‌ಲೈನ್ ಬುಕಿಂಗ್ ಅವಕಾಶ ಇಲ್ಲ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ ) 200 ಜನರಿಗೆ ಅವಕಾಶ ನೀಡಲಾಗುತ್ತದೆ. ವಾರಾಂತ್ಯಕ್ಕೆ ಸ್ಥಳೀಯ ಗ್ರಾಮಸ್ಥರಿಗೆ ಅವಕಾಶ ಲಭಿಸದ ಕಾರಣ ವಿಶೇಷವಾಗಿ ಅವಕಾಶ ನೀಡಲು 50 ಸ್ಥಳೀಯ ಗ್ರಾಮಸ್ಥರಿಗೆ ಪ್ರತ್ಯೇಕ ಆನ್‌ಲೈನ್ ಬುಕಿಂಗ್‌ ವ್ಯವಸ್ಥೆ ರೂಪಿಸಲಾಗಿದೆ.

ಕುದುರೆಮುಖ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ವನ್ಯಜೀವಿ ವಲಯ ಸಂಪರ್ಕಿಸಿ ಬುಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು. 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ವಾರಂತ್ಯಕ್ಕೆ ಮಾತ್ರ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ತತ್ಕಾಲ್ ಬುಕಿಂಗ್ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ರೂಪಿಸಲಾಗಿದ್ದು ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಕುರಿತು ಪ್ರತಿ ಗುರುವಾರ ಮಧ್ಯಾಹ್ನ ಆನ್‌ಲೈನ್‌ನಲ್ಲಿ ಅವಕಾಶ ನೀಡಲಾಗಿದೆ. ಉಳಿದ ದಿನಗಳಿಗೆ 300 ಜನರಿಗೆ ಬುಕಿಂಗ್ ಅವಕಾಶ ನೀಡಲಾಗಿದೆ. ಚಾರಣ ಕುರಿತು ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‌ಲೈನ್ ತಂತ್ರಾಂಶದಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಜೂ. 25ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಸ್ಥಳಿಯ ಹೋಂ ಸ್ಟೇ ಮಾಲೀಕರು ಕುದುರೆಮುಖ ವನ್ಯಜೀವಿ ವಲಯ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಇವರಲ್ಲಿ ಹೋಂ ಸ್ಟೇ ಕುರಿತ ದಾಖಲಾತಿಗಳನ್ನು ನೀಡಿ ಕಡ್ಡಾಯವಾಗಿ ಜೂನ್ ಅಂತ್ಯದ ಒಳಗೆ ನೋಂದಾಯಿಸಿಕೊಳ್ಳಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟ್ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್‌ ಫೇಲ್ ಯಾಗಿ ಡಿವೈಡರ್ ಗೆ ಡಿಕ್ಕಿ

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜೆ

Suddi Udaya

ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆ: ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

Suddi Udaya
error: Content is protected !!