ಗುರುವಾಯನಕೆರೆ : ಶ್ರೀ ಭ್ರಾಮರಿ ಭಜನಾ ಮಂಡಳಿ ಗುರುವಾಯನಕೆರೆ ಇಲ್ಲಿ ನಡೆಯುತ್ತಿರುವ ಕುಣಿತ ಭಜನಾ ತರಬೇತಿಗೆ ನೂತನ ಸದಸ್ಯರುಗಳ ಸೇರ್ಪಡೆಯ ಕಾರ್ಯಕ್ರಮವು ಇಲ್ಲಿಯ ನಮ್ಮ ಮನೆ ಹವ್ಯಕ ಭವನದಲ್ಲಿ ಕುಣಿತ ಭಜನಾ ತರಬೇತಿ ಪಡೆಯಲಿಚ್ಚಿಸುವ ಮಕ್ಕಳ ಪೋಷಕರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.
ಸಭೆಯ ಉದ್ಘ್ಹಾಟನೆಯನ್ನು ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರು ಉದ್ಘಾಟಿಸಿ ನಾವು ಕಲಿಸುತ್ತಿರುವ ಹಾಗೂ ಕಲಿಯುತ್ತಿರುವ ಭಜನೆಯು ನಮ್ಮ ಧಾರ್ಮಿಕ ಪರಂಪರೆಗೆ ಚ್ಯುತಿ ಬಾರದಂತೆ ಶ್ರದ್ಧಾ ಭಕ್ತಿಯಿಂದ ನಡೆಯುವಂತಾಗಲೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತ ಭಜನೆಯಲ್ಲಿ ಮಕ್ಕಳ ಪಾಲ್ಗೊಳ್ವಿಕೆಯ ಮಹತ್ವದ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಕುಣಿತ ಭಜನೆಯ ತರಬೇತುದಾರರು ಭಜನೆಯಿಂದ ವಿಭಜನೆ ಇಲ್ಲ ಎನ್ನುವುದರ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭ್ರಾಮರಿ ಭಜನಾ ಮಂಡಳಿಯ ಅಧ್ಯಕ್ಷ ರಮೇಶ್ ಬಂಗೇರ ಓಟ್ಲರವರು ವಹಿಸಿದ್ದರು.
ಭಜನಾ ತರಬೇತುದಾರರು ಹಾಗೂ ತಾಲೂಕು ಕುಣಿತ ಭಜನೆಯ ತರಬೇತಿದಾರರ ಸಂಘದ ನೂತನ ಅಧ್ಯಕ್ಷ ಸಂದೇಶ್ ಮದ್ದಡ್ಕ ಹಾಗೂ ಭಜನಾ ಮಂಡಳಿಯ ಕಾರ್ಯದರ್ಶಿಯವರಾದ ಸುಮಿತ್ರಾ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕು| ರಕ್ಷಾ ಸ್ವಾಗತಿಸಿ, ಕು| ವೀಕ್ಷಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಕುಣಿತ ಭಜನೆ ತರಬೇತಿ ಪಡೆಯುವ ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.